ಜಿಲ್ಲಾ ಮಟ್ಟದ ಈಶ ರೆಜುವಿನೇಷನ್ ಟ್ರೋಫಿ 2023

0

ಪುತ್ತೂರು: ಜಿಲ್ಲಾ ಮಟ್ಟದ ಈಶ ರೆಜುವಿನೇಷನ್ ಟ್ರೋಫಿ 2023 ರ ಪಂದ್ಯಾವಳಿಯು ವಿವೇಕಾನಂದ ಕಾಲೇಜಿನ ಮೈದಾನದಲ್ಲಿ ಆ. 13 ರಂದು ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶ್ರೀಮಾ ಪ್ರಿಯದರ್ಶಿನಿ ಮಾತನಾಡಿ ಯಾವುದೇ ಸಾಧನೆಯನ್ನು ಮಾಡುವಾಗ ಟೀಕೆ , ನಿಂದನೆ ಇರುವಂತದ್ದು ನೀವು ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಛಲದಿಂದ ನಿಮ್ಮ ಗುರಿಯೆಡೆಗೆ ಮುಂದುವರಿದಾಗ ಯಶಸ್ಸು ಸಾಧ್ಯ. ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯ. ಸೋಲಿನ ಬಗ್ಗೆ ಚಿಂತಿಸದಿರಿ ಎಂದರು.ಕ್ರೀಡಾ ಜೀವನಕ್ಕೆ ಶುಭವಾಗಲಿ ಎಂದು ಹಾರೈಸಿದರು.


ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ಸತೀಶ್ ಕುಮಾರ್ ಮಾತನಾಡಿ ನಮ್ಮ ದೇಶಕ್ಕೆ ಅತಿ ಹೆಚ್ಚು ಪದಕಗಳು ಕ್ರೀಡೆಯ ಮೂಲಕ ಬಂದಿದೆ. ಕ್ರೀಡೆಯ ಮೂಲಕ ನಾವು ಇಂದು ಯುವ ಜನತೆಗೆ ಪ್ರೀತಿ ಶಾಂತಿ ಮೂಡಿಸಬೇಕು. ಕ್ರೀಡೆ ಇದ್ದಲ್ಲಿ ನೆಮ್ಮದಿ ಇರಲು‌ ಸಾಧ್ಯ ಎಂದರು. ಧರ್ಮ ಧರ್ಮ ದ ಮಧ್ಯೆ, ಜಾತಿ ಜಾತಿಯ ಮಧ್ಯೆ ಜಗಳ ಕಾಣುತ್ತಾ ಇದ್ದೇವೆ ಅದಕ್ಕೆಲ್ಲಾ ಒಂದೇ ಪರಿಹಾರ ಎಂದರೆ ಅದು ಕ್ರೀಡೆ ಎಂದರು.


ಕ್ರೀಡೆಗೆ ಯಾವ ಧರ್ಮ , ಯಾವ ಜಾತಿ ಎಂಬುದು ಇಲ್ಲ . ಇನ್ನು ಮುಂದೆ ಕೂಡ ಈ ತರದ ಗ್ರಾಮೀಣ ಮಟ್ಟದ ಕ್ರೀಡಾಕೂಟಗಳ ಅಗತ್ಯವಿದೆ ಎಂದರು. ವಿದ್ಯೆಯೊಂದಿಗೆ ಕ್ರೀಡೆಯನ್ನು ಮೈಗೂಡಿಸಿಕೊಂಡಾಗ ವ್ಯಕ್ತಿ ಪರಿಪೂರ್ಣ ಆಗಲು ಸಾಧ್ಯ ಎಂದು ಭಾಗವಹಿಸಿದ ಕ್ರೀಡಾಪಟುಗಳಿಗೆ ಸಲಹೆ ನೀಡಿದರು. ಪೈನಲ್ ಪಂದ್ಯಾವಳಿಯು ಸೆಪ್ಟೆಂಬರ್ 23 ರಂದು ಆದಿಯೋಗಿ ಸಮ್ಮುಖದಲ್ಲಿ ಸದ್ಗುರುಗಳ ಹಾಗೂ ಮುಖ್ಯ ಅತಿಥಿಗಳ ಉಪಸ್ಥಿತಿ ಯಲ್ಲಿ ನಡೆಯಲಿದೆ.

ಮಹಿಳೆಯರ ಥ್ರೋ ಬಾಲ್ ನಲ್ಲಿ ಪ್ರಥಮ ಸ್ಥಾನವನ್ನು ಬಿ.ಎಮ್ ಫ್ರೆಂಡ್ಸ್ ಬೆಳ್ತಂಗಡಿ ತಂಡ ಪಡೆದುಕೊಂಡಿತು. ನಗದು ಹಾಗೂ ಟ್ರೋಫಿ ನೀಡಲಾಯಿತು ‌. ದ್ವಿತೀಯ ಸ್ಥಾನ ಏನೇಕಲ್ ಫ್ರೆಂಡ್ಸ್ , ತೃತೀಯ ಸ್ಧಾನ ಫ್ರೆಂಡ್ಸ್ ಕಳೆಂಜ ತಂಡ ಪಡೆದುಕೊಂಡಿತು. ನಗದು ಹಾಗೂ ಟ್ರೋಫಿ ನೀಡಲಾಯಿತು.

ಪುರುಷರ ವಿಭಾಗದ ವಾಲಿಬಾಲ್
ಪಂದ್ಯಾವಳಿಯಲ್ಲಿ ಶಿವ ಫ್ರೆಂಡ್ಸ್ ಬಂದಾರು ಪ್ರಥಮ ಸ್ಥಾನ ಗಳಿಸಿತು. ನಗದು ಹಾಗೂ ಟ್ರೋಫಿ ನೀಡಲಾಯಿತು. ರನ್ನರ್ ಅಪ್ ಎ.ಕೆ.ಎಫ್ ತಂಡ ಅಡ್ಯಾರ್ ಪಡೆದುಕೊಂಡಿತು. ನಗದು ಹಾಗೂ ಟ್ರೋಫಿ ನೀಡಲಾಯಿತು.

ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಜೋಸೆಫ್ ಇಂಟರ್ನಾಷನಲ್ ರೆಪ್ರಿ, ಶಂಕರ ಶೆಟ್ಟಿ ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ, ಅರವಿಂದ ಮತಿತ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here