ಸಾಮೆತ್ತಡ್ಕ ರಿಕ್ಷಾ ಚಾಲಕ ವಾಲ್ಟರ್ ಲೋಬೊ ನಿಧನ

0

ಪುತ್ತೂರು: ಸಾಮೆತ್ತಡ್ಕ ದಿ.ಫೆಲಿಕ್ಸ್ ಲಿಗೋರಿ ಲೋಬೊ ಹಾಗೂ ಲೂಸಿ ಲೋಬೊರವರ ಪುತ್ರ,ಡಿವೈನ್ ನಾಮಾಂಕಿತ ರಿಕ್ಷಾ ಚಾಲಕ ವಾಲ್ಟರ್ ಲೋಬೊ(52ವ.) ರವರು ಅನಾರೋಗ್ಯದಿಂದ ಆ.15 ರಂದು ನಿಧನ ಹೊಂದಿದ್ದಾರೆ.


ಮೃತ ವಾಲ್ಟರ್ ಲೋಬೊರವರು ಸಾಮೆತ್ತಡ್ಕ ಕ್ಯೂನಲ್ಲಿ ಬಾಡಿಗೆ ಮಾಡುತ್ತಿದ್ದು ಎಲ್ಲರೊಂದಿಗೆ ಜನಾನುರಾಗಿಯಾಗಿ ಬೆರೆಯುತ್ತಿದ್ದರು. ಮೃತ ವಾಲ್ಟರ್ ರವರು ಮಾಯಿದೆ ದೇವುಸ್ ಚರ್ಚ್ ನ ಕ್ರಿಸ್ಟೋಫರ್ ಅಸೋಸಿಯೇಶನ್ ಹಾಗೂ ಕಥೋಲಿಕ್ ಸಭಾದ ಸದಸ್ಯರಾಗಿದ್ದರು. ಮೃತ ವಾಲ್ಟರ್ ರವರು ತಾಯಿ ಲೂಸಿ ಲೋಬೊ, ಪತ್ನಿ ಡಾಲಿ ಲೋಬೊ, ಪುತ್ರ ಪ್ರಥಮ ಪಿಯುಸಿ ಓದುತ್ತಿರುವ ಜೀವನ್ ಲೋಬೊ, ಸಹೋದರರಾದ ವಲೇರಿಯನ್ ಲೋಬೊ, ಡೆನ್ನಿಸ್ ಲೋಬೊ,ಮೈಕಲ್ ಲೋಬೊ, ಸಹೋದರಿಯರಾದ ಹಿಲ್ಡಾ, ವೆರೋನಿಕಾರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here