ಅನ್ಸಾರಿಯ ಜುಮಾ ಮಸೀದಿ ಮಂಜ, ಪಿ ಎಂ ಕೆ ಉಸ್ತಾದ್ ಮೆಮೋರಿಯಲ್ ಇಸ್ಲಾಮಿಕ್ ಅಕಾಡೆಮಿ ಇದರ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ಬೆಳಿಯೂರುಕಟ್ಟೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹರಿಪ್ರಕಾಶ್ ಬೈಲಾಡಿಯವರು ಧ್ವಜಾರೋಹಣ ನೆರವೇರಿಸಿ ಸಂದೇಶ ಭಾಷಣ ಮಾಡಿದರು. ಯೂಸುಫ್ ಗೌಸಿಯಾ ಸಾಜ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಶಫೀಕ್ ಹಾದಿ ಅಲ್ ಹಾಶಿಮಿ ದುವಾ ನೆರವೇರಿಸಿದರು.
ಝಾಯಿದ್ ಫಾಳಿಲಿ ಸ್ವಾಗತಿಸಿದರು. ಯೂಸುಫ್ ಪೈಸಾರಿ, ಉಮರ್ ಪೈಸಾರಿ, ರವೂಫ್ ಹಾಶಿಮಿ, ರಿಯಾಝ್ ಪೈಸಾರಿ, ಅಲಿ ಗೇಟ್, ಮುಹಮ್ಮದ್ ಅಜ್ಜಿನಡ್ಕ, ಉಮರ್, ಅನಸ್, ಫಾಯಿಝ್, ಎಸ್.ಬಿ.ಎಸ್ ಅಧ್ಯಕ್ಷ ಅರ್ಸಲ್, ಕಾರ್ಯದರ್ಶಿ ಹಾದಿಲ್ ಉಪಸ್ಥಿತರಿದ್ದರು.
