ಕುಂಬ್ರ ಬದ್ರಿಯಾ ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಕುಂಬ್ರ ಬದ್ರಿಯಾ ನಗರ ಬದ್ರಿಯಾ ಜುಮಾ ಮಸ್ಜಿದ್ ಹಾಗೂ ಮದ್ರಸ ವಠಾರದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಜಮಾತ್ ಅಧ್ಯಕ್ಷ ಉಸ್ಮಾನ್ ಮುಸ್ಲಿಯಾರ್ ದ್ವಜಾರೋಹಣಗೈದರು.‌

ಖತೀಬರಾದ‌ ಇಸ್ಮಾಯಿಲ್ ಸ ಅದಿ ದುವಾ ನೆರವೇರಿಸಿದರು.‌ ಜಮಾತ್ ಕಾರ್ಯದರ್ಶಿ ಅದ್ರಾಮ ಕೊಯಿಲ, ಕೋಶಾಧಿಕಾರಿ ಇಸ್ಮಾಯಿಲ್ ಬದ್ರಿಯಾನಗರ, ಜಮಾತ್ ಮಾಜಿ ಕಾರ್ಯದರ್ಶಿ ಇಸ್ಮಾಯಿಲ್ ಕೋಳಿಗದ್ದೆ, ಫಾರೂಕ್ ಮಗಿರೆ, ಆದು ಕೊಯಿಲ, ಸಿಎಂ‌ಅಬ್ದುಲ್ ರಹಿಮಾನ್, ರಝಾಕ್ ಆಟೋ ಸಾಂತಿಯಡಿ,ಸಿರಾಜ್ ಬದ್ರಿಯಾನಗರ ,ಸಾದಿಕ್ ಮಗಿರೆ ಮತ್ತಿತರರು ಉಪಸ್ಥಿತರಿದ್ದರು. ಉಸ್ತಾದ್ ಖಲೀಲ್ ಸ ಅದಿ ಸ್ವಾಗತಿಸಿ, ಮುಅಲ್ಲಿಂ ವಂದಿಸಿದರು.

LEAVE A REPLY

Please enter your comment!
Please enter your name here