ಉಪ್ಪಿನಂಗಡಿ ವೇದಶಂಕರ ನಗರ ಶ್ರೀರಾಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಧ್ವಜಾರೋಹಣ ವನ್ನು ನೆರವೇರಿಸಿದ, ಮುಖ್ಯ ಅತಿಥಿ ನವೀನಾ ಹರೀಶ್ ಮಾತನಾಡಿ ರಾಷ್ಟ್ರ ಧ್ವಜದ ಮಹತ್ವ, ಲಾಂಛನ ಮತ್ತು ರಾಷ್ಟ್ರ ಧ್ವಜಕ್ಕೆ ಅವಮಾನವಾಗುದನ್ನು ಹೇಗೆ ತಡೆ ಗಟ್ಟ ಬೇಕು ಎಂಬುವುದರ ಬಗ್ಗೆ ವಿವರಿಸಿದರು.ಸಂಚಾಲಕ ಯು.ಜಿ ರಾಧಾ, ಉಪಾಧ್ಯಕ್ಷ ಅನುರಾಧ ಆರ್ ಶೆಟ್ಟಿ, ಕೋಶಾಧಿಕಾರಿ ಸುಧೀರ್ ಟಿ.ಎಸ್, ಸದಸ್ಯ ಜಯಂತ್ ಪೋರೋಳಿ, ಗುಣಕರ ಅಗ್ನಾಡಿ , ಪೋಷಕ ಸಂಘದ ಅಧ್ಯಕ್ಷ ಮೋಹನ್ ಭಟ್.ಪಿ ಪ್ರೌಢವಿಭಾಗದ ಮುಖ್ಯಗುರು ರಘುರಾಮ ಭಟ್.ಸಿ ಮತ್ತು ಪ್ರಾಥಮಿಕ ವಿಭಾಗದ ಮುಖ್ಯಗುರು ವಿಮಲ ಉಪಸ್ಥಿತರಿದ್ದರು.
ಚೆಸ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶ್ರೇಯಸ್ ರಾಮ್ ಮತ್ತು ಯೋಗಾಸನದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಯಕ್ಷಿತಾ ಮತ್ತು ವರಲಕ್ಷ್ಮೀ ಇವರನ್ನು ಅಭಿನಂದಿಸಲಾಯಿತು
ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿಜಿತಾ ಸ್ವಾಗತಿಸಿ, ದೈಹಿಕ ಶಿಕ್ಷಣ ಮಾತಾಜಿ ಶ್ರೀರಂಜಿನಿ ಮತ್ತು ವಿದ್ಯಾ ನಿರೂಪಿಸಿ, ಲತಾಕುಮಾರಿ ಕಾರ್ಯಕ್ರಮ ವಂದಿಸಿದರು.