





ಕಾಣಿಯೂರು: ನಾರ್ಯಬೈಲು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಎಸ್ ಡಿಎಂಸಿ ಅಧ್ಯಕ್ಷ ಪ್ರವೀಣ್ ಎಂ ಧ್ವಜಾರೋಹಣ ನೆರವೇರಿಸಿದರು. ಬೆಳಂದೂರು ಗ್ರಾ.ಪಂ ಸದಸ್ಯರಾದ ಕುಸುಮ ಅಂಕಜಾಲು, ಉಮೇಶ್ವರಿ ಅಗಳಿ, ಮೋಹನ್ ಅಗಳಿ, ಜಯಂತ್ ಅಬೀರ, ಗೌರಿ, ಪ್ರಮುಖರಾದ ಸೀತಾರಾಮ ಗೌಡ ಮುಂಡಾಲ, ಸಂತೋಷ್ ಕುಮಾರ್ ಮರಕ್ಕಡ, ಚಂದ್ರಶೇಖರ ಮುಂಡಾಲ ಶುಭ ಹಾರೈಸಿದರು. ಭಾಷಣ ಮತ್ತು ಛದ್ಮ ವೇಷ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯಗುರು ಜೋಯ್ಸ್ ಹೇಮಲತಾ ಗಂಗೇರ ಸ್ವಾಗತಿಸಿ, ಅತಿಥಿ ಶಿಕ್ಷಕಿ ಸೌಮ್ಯ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಸಹಾಯಕಿ ಹಾಗೂ ಶಾಲಾ ಎಸ್ ಡಿಎಂಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಜೋಕಾಲಿ ಬಳಗದ ಸದಸ್ಯರು ಉಪಸ್ಥಿತರಿದ್ದರು.












