ಕಾಣಿಯೂರು: ಕುದ್ಮಾರು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಸ್ವಾತ್ರಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ನವ್ಯಾ ಅನ್ಯಾಡಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಬೆಳಂದೂರು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಲಾಯಿತು. ದತ್ತಿನಿಧಿ ದಾನಿಗಳಾದ ಆನಂದ ಗೌಡ ಬರೆಪ್ಪಾಡಿ, ಸತೀಶ್ ಕುಮಾರ್ ಕೆಡೆಂಜಿ, ರಂಜಿತ್ ಮುದ್ಯ, ರೇವತಿ ಪಿ, ಮೇದಪ್ಪ ಕುವೆತ್ತೋಡಿ, ರೋಹಿತ್ ಖಂಡಿಗ, ಶೂರಪ್ಪ ಗೌಡ ಪಟ್ಟೆತ್ತಾನರವರು ಉಪಸ್ಥಿತರಿದ್ದು, ದತ್ತಿನಿಧಿಗಳನ್ನು ಆರ್ಹ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರ್ಶರೀ ನರಸಿಂಹ ಪ್ರಸಾದ್ ಕೊಡಲ್ಪಡುವ ದತ್ತಿನಿಧಿ, ನಿವೃತ್ತ ಮುಖ್ಯಶಿಕ್ಷಕಿ ಜುಲಿಯಾನ ಡಿಸೋಜರವರು ನೀಡಿರುವ ಕೊಡುಗೆಯನ್ನು ಹಸ್ತಾಂತರಿಸಲಾಯಿತು. ಶೂರಪ್ಪ ಗೌಡ ಪಟ್ಟೆತ್ತಾನರವರು 1,20,000ದ ದತ್ತಿನಿಧಿಯನ್ನು ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರುಗಳಿಗೆ ಹಸ್ತಾಂತರಿಸಿದರು. ದತ್ತಿನಿಧಿಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ನವ್ಯಾ ಅನ್ಯಾಡಿ, ಚೆನ್ನಪ್ಪ ಗೌಡ ನೂಜಿ, ಶಾಲಾ ಮುಖ್ಯಗುರು ಕುಶಾಲಪ್ಪ ಬಿ ಉಪಸ್ಥಿತರಿದ್ದರು. ಮುಖ್ಯಗುರು ಕುಶಾಲಪ್ಪ ಬಿ ಸ್ವಾಗತಿಸಿ, ಶಿಕ್ಷಕಿ ಸರೋಜ ವಂದಿಸಿದರು. ಶಿಕ್ಷಕಿ ಸುಜಾತ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ವೀರಾ ಡಿ’ಸೋಜ, ಶ್ರೀಲತಾ, ಸಂತೋಷ್ ಎನ್.ಡಿ, ವೀಣಾ, ಗೌರವ ಶಿಕ್ಷಕಿ ಭವ್ಯಾ ಸಹಕರಿಸಿದರು. ಸ್ನೇಹಿತರ ಬಳಗ ಕುದ್ಮಾರು ವತಿಯಿಂದ ಶಾಲೆಗೆ ವಾಲಿಬಾಲ್ ಮತ್ತು ನೆಟ್ ಕೊಡುಗೆಯಾಗಿ ನೀಡಿ, ಹಸ್ತಾಂತರಿಸಿದರು.