ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಹಾಗೂ ವಿಶೇಷ ಉಪನ್ಯಾಸ

0

ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಹಾಗೂ ಓದುವ ಹವ್ಯಾಸ ಹಾಗೂ ಬರೆಯುವ ಕೌಶಲ್ಯದ ಕುರಿತು ಕಾರ್ಯಾಗಾರವನ್ನು ನಡೆಸಲಾಯಿತು.

ಕೆಂದ್ರೀಯ ವಿದ್ಯಾಲಯದ ನಿವೃತ್ತ ಗ್ರಂಥಪಾಲಕ ಶಂಕರನಾರಾಯಣ ಭಟ್ ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ಬಗ್ಗೆ ಉಪನ್ಯಾಸವನ್ನು ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುತ್ತೂರು ಅಂಬಿಕಾ ಮಹಾವಿದ್ಯಾಲಯದ ಉಪನ್ಯಾಸಕಿ ಹಾಗೂ ಬರಹಗಾರ್ತಿ ಶಶಿಕಲಾ ವರ್ಕಾಡಿ ಸಾಹಿತ್ಯ ಹಾಗೂ ಬರೆಯುವ ಕೌಶಲ್ಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸಿದ್ದರು. ಸಂತ ಆಗ್ನೇಸ್ ಕಾಲೇಜು ಮಂಗಳೂರು ಇಲ್ಲಿ ನಡೆದ ಪುಸ್ತಕ ವಿಮರ್ಶೆ (ವಿಡಿಯೋ) ಸ್ಪರ್ದೆಯಲ್ಲಿ ವಿಜೇತರಾದ ಕವಿತಾ ಎಸ್ ಪೈ ಹಾಗೂ ಹರ್ಷಿತಾ ಎನ್ ಇವರನ್ನು ಗೌರವಿಸಲಾಯಿತು. 

ಗ್ರಂಥಪಾಲಕ ರಾಮ ಕೆ ಸ್ವಾಗತಿಸಿ, ಅನನ್ಯ ಅಡಿಗ, ಕೃತಿಕ, ಶ್ರಾವ್ಯ , ಸ್ವಾತಿ ಪಿ, ಸಿಂಧುಕುಮಾರಿ, ವಿದ್ಯಾಶ್ರೀ ಮತ್ತು ದೀಪ್ತಿ ಪ್ರಾರ್ಥಿಸಿದರು. ವಿದ್ಯಾಶ್ರೀ ಮತ್ತು ಶ್ರಾವ್ಯ ಅತಿಥಿಗಳನ್ನು ಪರಿಚಯಿಸಿದರು. IQAC ಸಂಚಾಲಕ ಡಾ. ಕಾಂತೇಶ ಎಸ್ ವಂದಿಸಿದರು. ಪ್ರಥಮ ವರ್ಷದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು. ತೃತೀಯ ಬಿಕಾಂ ವಿದ್ಯಾರ್ಥಿನಿ ಅನನ್ಯ ಅಡಿಗ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here