ನೆಲ್ಯಾಡಿ: ಕೀರ್ತಿಶೇಷ ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯ ಜಾನಕಿ ಅಮ್ಮ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನ ಪಡುಬೆಟ್ಟು ಇದರ ವತಿಯಿಂದ ಆಗಸ್ಟ್ ತಿಂಗಳ ಗೌರವಾರ್ಪಣಾ ಕಾರ್ಯಕ್ರಮ ಆ.13ರಂದು ಯಕ್ಷಗಾನದ ಹಿರಿಯ ಅರ್ಥದಾರಿ ಬಲ್ಯ ಸುಂದರ ಶೆಟ್ಟಿಯವರ ಮನೆಯಲ್ಲಿ ನಡೆಯಿತು.
ವಿಷ್ಣುಮೂರ್ತಿ ಭಟ್‌ರವರು ಉದ್ಘಾಟಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಗುರುಮೂರ್ತಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಬಲ್ಯ ವಿನಾಯಕ ಯಕ್ಷಗಾನ ಸಂಘದ ಹಿರಿಯ ಅರ್ಥದಾರಿ ಬಲ್ಯ ಸುಂದರ ಶೆಟ್ಟಿಯವರನ್ನು ಪ್ರತಿಷ್ಠಾನದ ವತಿಯಿಂದ ವಿಷ್ಣುಮೂರ್ತಿ ಭಟ್ ಮತ್ತು ಪದಾಧಿಕಾರಿಗಳು ಶಾಲು ಹೊದಿಸಿ, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಗೌರವಿಸಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಗುಡ್ಡಪ್ಪ ಬಲ್ಯ ಅಭಿನಂದನಾ ಭಾಷಣ ಮಾಡಿದರು. ಬಲ್ಯ ತಿಮ್ಮಪ್ಪ ಗೌಡ ಸನ್ಮಾನ ಪತ್ರ ವಾಚಿಸಿದರು.
ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಬಲ್ಯ ವಿನಾಯಕ ಭಜನಾ ಮಂಡಳಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಹಿರಿಯ ಅರ್ಥದಾರಿ ವಿಠಲ ಮಾರ್ಲ, ನೆಲ್ಯಾಡಿ ಗ್ರಾ.ಪಂ.ಸದಸ್ಯ ರವಿಪ್ರಸಾದ್ ಶೆಟ್ಟಿ ಬಲ್ಯ, ವಿನಾಯಕ ಯಕ್ಷಗಾನ ಸಂಘದ ಅಧ್ಯಕ್ಷ ಜಯರಾಮ ಗೌಡ, ಪಡುಬೆಟ್ಟು ಶ್ರೀ ಬಾಲಸುಬ್ರಹ್ಮಣ್ಯ ಯಕ್ಷಗಾನ ಮಂಡಳಿಯ ಸಂಚಾಲಕ ಗಂಗಾಧರ ಶೆಟ್ಟಿ ಹೊಸಮನೆ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶಗ್ರಿತ್ತಾಯ ಕೊಕ್ಕಡ, ಸುಂದರ ಶೆಟ್ಟಿಯವರ ಮನೆಯ ಸದಸ್ಯರು ಉಪಸ್ಥಿತರಿದ್ದರು. ಭಾಗವತ ಕುಸುಮಾಧರ ಆಚಾರ್ಯರವರ ಯಕ್ಷಗಾನದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಲ್ಯ ಶ್ರೀ ವಿನಾಯಕ ಯಕ್ಷಗಾನ ಸಂಘದ ಮತ್ತು ಅತಿಥಿ ಕಲಾವಿದರಿಂದ ‘ ಮಾಗಧ ವಧೆ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಸುಬ್ರಹ್ಮಣ್ಯ ಶಗ್ರಿತ್ತಾಯ ಸ್ವಾಗತಿಸಿದರು. ಗಂಗಾಧರ ಶೆಟ್ಟಿ ನಿರೂಪಿಸಿದರು. ರವಿಪ್ರಸಾದ್ ಶೆಟ್ಟಿ ವಂದಿಸಿದರು.