ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಧನೆಗೆ ಸತತ 5ನೇ ಬಾರಿ ಪ್ರಶಸ್ತಿ

0

ಸಂಘದ ಕಾರ್ಯನಿರ್ವಾಹಣಾಧಿಕಾರಿ ಜಯಂತಿ ಭಾಸ್ಕರ್

2022-23ನೇ ಸಾಲಿನಲ್ಲಿ ಸಹಕಾರಿ ಸಂಘವು 4011ಎ’ ತರಗತಿ ಸದಸ್ಯರನ್ನು ಹೊಂದಿದ್ದು ರೂ.2 ಕೋಟಿ 93ಲಕ್ಷ ಪಾಲು ಬಂಡವಾಳ ಹೊಂದಿರುತ್ತದೆ. ಸಹಕಾರಿ ಸಂಘವು ರೂ. 21ಕೋಟಿ 44 ಲಕ್ಷ ಠೇವಣಿ ಹೊಂದಿದ್ದು, ಸದಸ್ಯರ ಹೊರಬಾಕಿ ಸಾಲ ರೂ.27 ಕೋಟಿ 05 ಲಕ್ಷ ಇರುತ್ತದೆ. 2022-23ನೇ ಸಾಲಿನಲ್ಲಿ ರೂ.198 ಕೋಟಿ 07 ಲಕ್ಷ ವ್ಯವಹಾರ ನಡೆಸಿದ್ದು ಪ್ರಸಕ್ತ ಸಾಲಿನಲ್ಲಿ 1 ಕೋಟಿ 10 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ.


ಪ್ರಸಕ್ತ ಸಾಲಿನಲ್ಲಿ ನಮ್ಮ ಸಹಕಾರ ಸಂಘವು ಸುಮಾರು ರೂ.1 ಕೋಟಿ 65 ಲಕ್ಷ ಲಾಭ ಗಳಿಸುವ ನಿರೀಕ್ಷೆ ಮಾಡಿದ್ದೆವು. ಆದರೆ ದ.ಕ. ಜಿಲ್ಲಾ ಕೇಂದ್ರ ಬ್ಯಾಂಕಿನಲ್ಲಿ ಇಟ್ಟಿರುವ ಠೇವಣಿಗಳಿಗೆ ಎರಡು ವರ್ಷಗಳಿಂದ ರೂ.28 ಲಕ್ಷ ಟಿ.ಡಿ.ಎಸ್ ಪಾವತಿಸಲಾಗಿದೆ. ಆದಾಯ ತೆರಿಗೆ ಬಾಬ್ತು ರೂ.13 ಲಕ್ಷ 62 ಸಾವಿರ ಪಾವತಿಸಲಾಗಿದೆ ಮತ್ತು ಸರಕಾರದ ದೀರ್ಘಾವಧಿ ಕೃಷಿ ಸಾದ ಬಡ್ಡಿ ರೂ.25 ಲಕ್ಷ 72 ಸಾವಿರ ಬರಲು ಬಾಕಿ ಇರುತ್ತದೆ. ಈ ಎಲ್ಲಾ ಮೊತ್ತಗಳಿಗೆ ಲಾಭಾಂಶದಲ್ಲಿ ಕಾಯ್ದಿರಿಸಲಾಗಿದ್ದು ಪ್ರಸಕ್ತ ಸಾಲಿನಲ್ಲಿ ಲಾಭಾಂಶವು ಕಡಿಮೆಯಾಗಲು ಕಾರಣವಾಗಿರುತ್ತದೆ.


ಆರ್ಯಾಪು ಸಹಕಾರಿ ಸಂಘದ ಕಾರ್ಯ ಕ್ಷೇತ್ರವು 3 ಗ್ರಾಮಗಳಾದ ಆರ್ಯಾಪು, ಕೆಮ್ಮಿಂಜೆ ಮತ್ತು ಕುರಿಯ ಗ್ರಾಮಗಳನ್ನೊಳಗೊಂಡಿರುತ್ತದೆ. ಆರ್ಯಾಪು ಗ್ರಾಮದ ಸಂಪ್ಯದಲ್ಲಿ ಕೇಂದ್ರ ಕಛೇರಿ ಹೊಂದಿದ್ದು, ಕೆಮ್ಮಿಂಜೆ ಗ್ರಾಮದಲ್ಲಿ ಮತ್ತು ಕುರಿಯ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಶಾಖಾ ಕಛೇರಿಯನ್ನು ಹೊಂದಿರುತ್ತದೆ. ಸಂಪ್ಯ ಹಾಗೂ ಒಳತ್ತಡ್ಕ ಮತ್ತು ಕುರಿಯ ಮಾವಿನಕಟ್ಟೆ ಎಂಬಲ್ಲಿ ಪಡಿತರ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಹಕಾರಿ ಸಂಘದ ಕೇಂದ್ರ ಕಛೇರಿಯಲ್ಲಿ ಕೃಷಿಕರಿಗೆ ಪಹಣಿ ಪತ್ರ ಒದಗಿಸಿಕೊಡುವ ಸೌಲಭ್ಯ ಕಲ್ಪಿಸಲಾಗಿದೆ. ಕುರಿಯ ಶಾಖೆಯಲ್ಲಿ ಕಛೇರಿಯ ಭದ್ರತೆಗೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸಹಕಾರ ಸಂಘದ ರಸ್ತೆ ಬದಿಯಲ್ಲಿ ಹೊಸದಾಗಿ ಸಿ.ಸಿ ಕ್ಯಾಮರಾ ಅಳವಡಿಸಲಾಗಿದೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ ಯೋಜನೆಯನ್ನು ಉಚಿತವಾಗಿ ಆನ್‌ಲೈನ್ ನೋಂದಾವಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಹಕಾರಿ ಸಂಘದ ಸದಸ್ಯರು ಮೃತ ಪಟ್ಟಲ್ಲಿ ತಕ್ಷಣ ರೂ.5000/- ನೀಡುವ ಕಾರ್ಯಕ್ರಮ ಜಾರಿಯಲ್ಲಿರುತ್ತದೆ.


ಆರ್ಯಾಪು ಸಹಕಾರಿ ಸಂಘದ ಆಡಳಿತ ಮಂಡಳಿಯಲ್ಲಿ 12 ಜನ ಚುನಾಯಿತ ಸದಸ್ಯರಿದ್ದು ಅಧ್ಯಕ್ಷರಾಗಿ ಹೆಚ್.ಮಹಮ್ಮದ್ ಆಲಿ, ಉಪಾಧ್ಯಕ್ಷರಾಗಿ ಕೆ.ಸದಾನಂದ ಶೆಟ್ಟಿ ಕೊರೇಲು, ನಿರ್ದೇಶಕರುಗಳಾಗಿ ಬಿ.ಸುರೇಂದ್ರ ರೈ ಬಳ್ಳಮಜಲು, ಬಿ. ಗಣೇಶ್ ರೈ ಬಳ್ಳಮಜಲು, ಸತೀಶ್ ನಾಕ್ ಪರ್ಲಡ್ಕ, ಗಣೇಶ್ ರೈ ತೊಟ್ಲಮೂಲೆ, ಶೀನಪ್ಪ ಮರಿಕೆ, ಇಸ್ಮಾಯಿಲ್ ಮರಿಕೆ, ಮೀನಾಕ್ಷಿ ನೀರ್ಕಜೆ, ಚಂದ್ರಕಲಾ ಓಟೆತ್ತಿಮಾರು, ತಿಮ್ಮಪ್ಪ ಜಂಗಮೊಗೇರು, ಸಂಶುದ್ದೀನ್ ನೀರ್ಕಜೆ, ಇಬ್ರಾಹಿಂ ಇಡಬೆಟ್ಟು. ವಲಯ ಮೇಲ್ವಿಚಾರಕರಾದ ಶರತ್ ಡಿ. ಸಂಘದ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಯಂತಿ ಭಾಸ್ಕರ್ ಹಾಗೂ ಸಿಬ್ಬಂದಿಗಳಾಗಿ ಅಜಿತ್ ಕುಮಾರ್ ರೈ, ಶ್ರೀಮತಿ ಸುಭಾಷಿನಿ, ಉಮೇಶ್ ಎಸ್ ಕೆ. ವಿನಯ್‌ಕುಮಾರ್, ರಾಜೇಶ್ ಬಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರತಿಷ್ಟಿತ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022-23ರ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಪ್ರೋತ್ಸಾಹಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅತೀವ ಸಂತಸವಾಗಿದೆ. ಈ ಪ್ರಶಸ್ತಿಗೆ ಕಾರಣಕರ್ತರಾದ ನಮ್ಮ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳಿಗೆ, ಸಹಕಾರಿ ಸಂಘದ ಗೌರವಾನ್ವಿತ ಸದಸ್ಯರುಗಳಿಗೆ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ|ಎಂ.ಎನ್. ರಾಜೇಂದ್ರಕುಮಾರ್‌ರವರಿಗೆ, ಎಲ್ಲಾ ನಿರ್ದೇಶಕರುಗಳಿಗೆ ಮತ್ತು ನಮ್ಮ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ

-ಹೆಚ್. ಮಹಮ್ಮದ್ ಆಲಿ
ಅಧ್ಯಕ್ಷರು, ಆರ್ಯಾಪು ಪ್ರಾ.ಕೃ.ಪ.ಸ.ಸಂ.ನಿ.

ಆ.19: ಪ್ರಶಸ್ತಿ ಪ್ರದಾನ..
ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಆ.19 ರಂದು ನಡೆಯುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಕಛೇರಿಯಲ್ಲಿ ನಡೆಯುವ ಬ್ಯಾಂಕಿನ ಮಹಾಸಭೆಯಲ್ಲಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಡಾ|ಎಂ.ಎನ್. ರಾಜೇಂದ್ರ ಕುಮಾರ್‌ರವರು ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಿದ್ದಾರೆ.

LEAVE A REPLY

Please enter your comment!
Please enter your name here