ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಣಾಲು ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯಿತಿ ರಚನೆ ಸಂಬಂಧ ಹೋರಾಟ ನಡೆಸಲು ಹೋರಾಟ ಸಮಿತಿ ರಚನೆ ಮಾಡಲಾಗಿದೆ.
ಆ.15ರಂದು ಕೋಲ್ಪೆಯಲ್ಲಿ ನಡೆದ ಕೊಣಾಲು ಗ್ರಾಮಸ್ಥರ ಸಭೆಯಲ್ಲಿ ಸಮಿತಿ ರಚನೆ ಮಾಡಲಾಯಿತು. ಸಮಿತಿಯ ಗೌರವಾಧ್ಯಕ್ಷರಾಗಿ ಕೆ.ಎಸ್.ರಝಕ್ ಸಮರಗುಂಡಿ, ಅಧ್ಯಕ್ಷರಾಗಿ ಕೆ.ಕೆ.ಇಸ್ಮಾಯಿಲ್, ಉಪಾಧ್ಯಕ್ಷರಾಗಿ ಗ್ರಾ.ಪಂ.ಸದಸ್ಯೆ ಪ್ರಜಲಬಾಬು, ಕೇಶವ ಗೌಡ ಆರ್ಲ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಇ ಮುಹಮ್ಮದ್ ರಫೀಕ್, ಜೊತೆ ಕಾರ್ಯದರ್ಶಿಯಾಗಿ ಬಿನ್ಸಿ ವಿನೋಯ್ ಪಾಂಡಿಬೆಟ್ಟು, ನಿತಿನ್ ಪಾಂಡಿಬೆಟ್ಟು, ಸಂಚಾಲಕರಾಗಿ ಬೇಬಿ ಅಬ್ರಹಾಂ, ಶೇಖರ್ ಟೈಲರ್, ಎಸ್.ಕೆ.ರಝಾಕ್, ಕೋಶಾಧಿಕಾರಿಯಾಗಿ ಗ್ರಾ.ಪಂ.ಸದಸ್ಯ ವಿ.ಸಿ.ಜೋಸೆಪ್ ಆರ್ಲ, ಸಂಘಟನಾ ಕಾರ್ಯದರ್ಶಿಯಾಗಿ ಮನೋಜ್ ಆರ್ಲ, ಬಾಬು ಪಾಂಡಿಬೆಟ್ಟು, ಪತ್ರಿಕಾ ಕಾರ್ಯದರ್ಶಿಯಾಗಿ ರಹೀಂ ಎಂ.ಕೆ., ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಆಸಿಫ್ ಕೆ.ಕೆ., ಶಾಧಿಕ್ ಕೆ.ಎಚ್., ಝುನೈಫ್ ಕೋಲ್ಪೆ, ಸಮಿತಿ ಗೌರವ ಸಲಹೆಗಾರರಾಗಿ ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ಗ್ರಾ.ಪಂ.ಸದಸ್ಯೆ ವಾರಿಜಾಕ್ಷಿ ಸುರೇಶ್, ಕೆ.ಕೆ.ಅಬೂಬಕ್ಕರ್, ಹನೀಫ್ ಕೆ.ಯು., ಬಾಳಪ್ಪ ಕಲಾಯಿ, ಯು.ಕೆ.ಹಮೀದ್, ಕೆ.ಪಿ.ಅಬೂಬಕ್ಕರ್, ಜನಾರ್ದನ ಗೌಡ ಬೊಳ್ಳುರ್ಪು, ಕೆ.ಸಿ.ಜೋಯಿ, ಮುತ್ತಪ್ಪ ಗೌಡ ಕೋಲ್ಪೆ, ಎಸ್.ಇಕ್ಬಾಲ್, ಕೆ.ಎಂ.ಮುಹಮ್ಮದ್, ಶಮೀರ್ ಅರ್ಶದಿ, ಮ್ಯೊದೀನ್ ಎಸ್.ಎಂ.ಕೆ., ಉಮೇಶ ಸಂಕೇಶ, ಜಾಬೀರ್, ರಫೀಕ್ ಕುಮೇರು, ಕೆ.ಎಂ.ಹನೀಫ್, ಹೆನ್ರಿ ಡಿ. ಸೋಜ, ಯು.ಕೆ.ಉಮ್ಮರ್, ಇಕ್ಬಾಲ್ ಇಕ್ಕು, ಎಂ.ಸಿ. ವಿನೋದ್, ನ್ಯಾಯವಾದಿ ಜೇಮ್ಸ್, ರಾಜೇಶ್ ಪಾಂಡಿಬೆಟ್ಟು, ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಪ್ರವೀಣ್ ಕುಮಾರ್ ಕೋಲ್ಪೆ, ನೋಟರಿ ಸಾಹಿರರವರನ್ನು ಆಯ್ಕೆ ಮಾಡಲಾಯಿತು.