ಮೆಸ್ಕಾಂ ಜನಸಂಪರ್ಕ ಸಭೆ – 26 ದೂರುಗಳು ಸ್ವೀಕಾರ – ಹಳೆಯ ತಂತಿ ಬದಲಾವಣೆ, ಲೈನ್‌ಗಳಿಗೆ ಮಧ್ಯಂತರ ಕಂಬಗಳ ಅಳವಡಿಕೆಗೆ ಆಗ್ರಹ

0

ಪುತ್ತೂರು: ತಂತಿ ಬದಲಾವಣೆ, ಲೈನ್‌ಗಳಿಗೆ ಮಧ್ಯಂತರ ಕಂಬಗಳ ಅಳವಡಿಕೆ ಕುರಿತು ಸಹಿತ ಒಟ್ಟು 26 ದೂರುಗಳು ಪುತ್ತೂರು ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಗ್ರಾಹಕರಿಂದ ಬಂದಿದೆ.

ಮಂಗಳೂರು ವಿದ್ಯುತ್ ಸರಬರಾಜು ಕಂಪನಿ(ಮೆಸ್ಕಾಂ) ವತಿಯಂದ ಆ.17ರಂದು ಬನ್ನೂರು ಮೆಸ್ಕಾಂ ಕಚೇರಿಯಲ್ಲಿ ಸಾರ್ವಜನಿಕ ಜನಸಂಪರ್ಕ ಸಭೆಯು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಹಕರು ತಮ್ಮ ದೂರುಗಳನ್ನು ನೀಡಿದರು. ಇದೇ ಸಂದರ್ಭ ದೂರವಾಣಿಯ ಮೂಲಕವೂ ದೂರು ಸ್ವೀಕರಿಸಲಾಯಿತು. ಈ ಸಂದರ್ಭ ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ ಎಂ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ ಎ, ಲೆಕ್ಕಅಧೀಕ್ಷಕ ನಾರಾಯಣ ಶೆಟ್ಟಿ, ಸಹಾಯಕ ಇಂಜಿನಿಯರ್ ವಸಂತ ಮತ್ತು ಇತರ ಶಾಖಾ ಇಂಜಿನಿಯರ್‌ಗಳು ಸಭೆಯಲ್ಲಿ ದೂರುಗಳಿಗೆ ಸಂಬಂಧಿಸಿ ಮಾಹಿತಿ ಪಡೆದು ಕೊಂಡರು.

LEAVE A REPLY

Please enter your comment!
Please enter your name here