ಪುತ್ತೂರು: ಪುತ್ತೂರು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದಲ್ಲಿ ಅಟಲ್ ಟಿಂಕರಿಂಗ್ ಕಾರ್ಯಗಾರ ಹಮ್ಮಿಕೊಳ್ಳಲಾಯಿತು. ಶಾಲಾ ಮುಖ್ಯಶಿಕ್ಷಕಿ ರೋಸಲಿನ್ ಲೋಬೋರವರು ಉದ್ಘಾಟನೆ ನೆರವೇರಿಸಿ ಅಟಲ್ ಟಿಂಕರಿಂಗ್‌ನಲ್ಲಿ ನಡೆಸುವತಂಹ ಎಲ್ಲಾ ಚಟುವಟಿಕೆಗಳು ನಮ್ಮ ವಿದ್ಯಾರ್ಥಿನಿಯರು ಮುಂದಿನ ಯುವ ವಿಜ್ಞಾನಿಗಳಾಗಲು ಪ್ರೇರಣೆಯಾಗಲಿ ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಐಟಿ ಉದ್ಯೋಗಿಗಳಾದ ಜಗನ್ನಿವಾಸ್, ರಂಜನ್‌ನಾಯಕ್ ಎನ್, ನವೀನ್ ಕುಮಾರ್, ಗ್ಯಾವಿನ್ ಕ್ರಿಸ್ ಮಸ್ಕರೇನ್ಹಸ್‌ರವರು ಎಲೆಕ್ಟ್ರಾನಿಕ್ಸ್‌ನ ಬುನಾದಿ ವಿಷಯಗಳನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿನಿಯರಿಗೆ ತಿಳಿಸಿದರು. 45 ವಿದ್ಯಾರ್ಥಿನಿಯರು ತರಬೇತಿಯ ಸದುಪಯೋಗವನ್ನು ಪಡೆದರು. ಶಿಕ್ಷಕಿ ಲೆನಿಟಾ ಮೊರಾಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರೂಪಾ ಡಿ. ಕೋಸ್ಟ ವಂದಿಸಿದರು.