ವೇಶ್ಯೆ, ಸೂಳೆ ಪದಬಳಕೆ ನಿಷಿದ್ಧ- ಪರ್ಯಾಯ ಪದದ ಕೈಪಿಡಿ ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್

0

ಪುತ್ತೂರು: ಇನ್ನು ಮುಂದೆ ವೇಶ್ಯೆ, ಸೂಳೆ ಬಳಸುವಂತಿಲ್ಲ. ಇದಕ್ಕೆ ಬದಲಾಗಿ ಪರ್ಯಾಯ ಪದ ಬಳಸುವಂತೆ ಸುಪ್ರೀಂ ಕೋರ್ಟ್ ನೂತನ ಕೈಪಿಡಿ ಹೊರತಂದಿದೆ.

ಈ ಕೈಪಿಡಿಯನ್ನು ಬಿಡುಗಡೆ ಮಾಡಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಈ ಕೈಪಿಡಿ ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲೂ ಲಭ್ಯವಿದೆ. ಹೊಸ ಪದಗಳ ಬಗ್ಗೆ ವ್ಯಾಪಕ ಅರಿವು ಮೂಡಿಸಲಿದ್ದು, ಪರ್ಯಾಯ ಪದಗಳ ಕೈಪಿಡಿ ನ್ಯಾಯಾಧೀಶರು, ವಕೀಲರಿಗೆ ಸಹಕಾರಿ ಎಂದು ಹೇಳಿದರು. ವಾದ ಪತ್ರ, ವಾದ ಮತ್ತು ತೀರ್ಪು ಬರೆಯುವ ಸಂದರ್ಭದಲ್ಲಿ ಈ ಪದಗಳನ್ನು ಬಳಸುವಂತಿಲ್ಲ. ಅದಕ್ಕೆ ಸೂಚಿಸಲಾದ ಪರ್ಯಾಯ ಪದಗಳನ್ನು ಬಳಸಬೇಕು. ಈ ಕೈಪಿಡಿಯಲ್ಲಿ ಎಲ್ಲ ಮಾಹಿತಿಯನ್ನೂ ನೀಡಲಾಗಿದೆ. ಕರ್ತವ್ಯ ನಿಷ್ಟ ಪತ್ನಿ, ವಿಧೇಯ ಪತ್ನಿ, ಉಪ ಪತ್ನಿ, ವ್ಯಭಿಚಾರಿಣಿ, ವೇಶ್ಯೆ, ಸೂಳೆ, ಪ್ರೇಯಸಿ, ಅವಿವಾಹಿತೆ ಮೊದಲಾದ ಪದಗಳನ್ನು ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

LEAVE A REPLY

Please enter your comment!
Please enter your name here