ಪುತ್ತೂರು ಸ್ಥಿರಾಸ್ತಿ ಮಾರ್ಗಸೂಚಿ ಬೆಲೆ ಪರಿಷ್ಕರಣೆ

0

ಪುತ್ತೂರು: ಪುತ್ತೂರು ಉಪನೋಂದಣಾ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿ ಮಾರುಕಟ್ಟೆ ಮಾರ್ಗಸೂಚಿ ಬೆಲೆ ಪರಿಷ್ಕರಣೆ ಮಾಡಲಾಗಿದೆ.
2023-24 ನೇ ಸಾಲಿಗೆ ಸಂಬಂಧಿಸಿ ಮಾರುಕಟ್ಟೆ ಮೌಲ್ಯ ಮಾಪನ ಉಪ ಸಮಿತಿ ಮಾರುಕಟ್ಟೆ ಮೌಲ್ಯ ಪರಿಷ್ಕರಿಸಿದೆ. ಈ ದರ ಪಟ್ಟಿಯಲ್ಲಿ ಹೊಸ ಯೋಜನೆಯನ್ನು ಸೇರ್ಪಡೆ ಮಾಡಿ ಪರಿಷ್ಕೃತ ದರ ಪಟ್ಟಿಯ ಕರಡು ಪ್ರತಿಯನ್ನು ಸಾರ್ವಜನಿಕ ಅವಗಾಹನೆಗೆ ತರಲು ಪುತ್ತೂರು ವ್ಯಾಪ್ತಿಯ ತಾಲೂಕು ಕಛೇರಿ, ಉಪನೋಂದಣ ಕಛೇರಿ ಮತ್ತು ಪುತ್ತೂರು ನಗರಸಭೆ ಕಛೇರಿ ಹಾಗೂ ಕಡಬ ತಾಲೂಕು ಕಛೇರಿ ಮತ್ತು ಕಡಬ ಪಟ್ಟಣ ಪಂಚಾಯತ್ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು 15 ದಿನಗಳ ಒಳಗೆ ತಮ್ಮ ಆಕ್ಷೇಪಣೆ – ಅಭಿಪ್ರಾಯಗಳು ಇದ್ದಲ್ಲಿ ಸದಸ್ಯ ಕಾರ್ಯದರ್ಶಿ ಮಾರುಕಟ್ಟೆ ಮೌಲ್ಯ ಮಾಪನ ಉಪಸಮಿತಿ ಪುತ್ತೂರು ಹಾಗೂ ಉಪನೋಂದಣಾಧಿಕಾರಿಗಳು ಪುತ್ತೂರು ಇವರಿಗೆ ಸಲ್ಲಿಸಬಹುದೆಂದು ಪುತ್ತೂರು ಉಪನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here