ಮಾಣಿಲ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ, ಬೆಳ್ಳಿಹಬ್ಬ ಮಹೋತ್ಸವಕ್ಕೆ ಪುತ್ತೂರಿನಲ್ಲಿ ಹೊರೆಕಾಣಿಕೆ ಸ್ವೀಕೃತಿ ಕಚೇರಿ ಉದ್ಘಾಟನೆ

0

ಉದ್ಘಾಟನೆಯ ಸಂದರ್ಭದಲ್ಲೇ ಕಚೇರಿಯಲ್ಲಿ ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ

ಪುತ್ತೂರು: ಮಾಣಿಲ ಶ್ರೀಧಾಮದಲ್ಲಿ ಆ.25ರವರೆಗೆ ನಡೆಯುವ 48 ದಿನಗಳ ಪರ್ಯಂತ ಸಾಮೂಹಿಕ ಶ್ರೀಲಕ್ಷ್ಮೀಪೂಜೆ ಹಾಗೂ ಆ.25 ರಿಂದ ಆ.27ರವರೆಗೆ ಶ್ರೀವರಮಹಾಲಕ್ಷ್ಮೀ ವೃತಾಚರಣೆ ಬೆಳ್ಳಿ ಹಬ್ಬದ ಕಾರ್ಯಕ್ರಮದ ಅಂಗವಾಗಿ ಪುತ್ತೂರು ಹೊರೆಕಾಣಿಕೆ ಸಮಿತಿ ನೇತೃತ್ವದಲ್ಲಿ ಭಕ್ತ ಜನರ ಸಹಕಾರದೊಂದಿಗೆ ಆ.20ರಂದು ಬೃಹತ್ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಇದಕ್ಕೆ ಪೂರಕವಾಗಿ ಹೊರೆಕಾಣಿಕೆ ಸ್ವೀಕೃತಿ ಕಚೇರಿಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದ ಕಟ್ಟಡದ ಕೊಠಡಿಯಲ್ಲಿ ಆ.18ರಂದು ಬೆಳಿಗ್ಗೆ ಉದ್ಘಾಟಿಸಲಾಯಿತು. ಉದ್ಘಾಟನೆಯ ಸಂದರ್ಭದಲ್ಲೇ ಭಕ್ತರು ಕಚೇರಿಗೆ ಹೊರೆಕಾಣಿಕೆ ತಂದಿದ್ದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ.ಐತ್ತಪ್ಪ ನಾಯ್ಕ್ ಅವರು ಹೊರೆಕಾಣಿಕೆ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ ಪುತ್ತೂರಿನಿಂದ ನಿರೀಕ್ಷೆಗೂ ಮೀರಿ ಮಾಣಿಲ ಕ್ಷೇತ್ರ ಹೊರೆಕಾಣಿಕೆ ಸಮರ್ಪಣೆಯಾಗಲಿ ಎಂದು ಹಾರೈಸಿದರು. ಹೊರೆಕಾಣಿಕೆ ಪುತ್ತೂರು ವಲಯ ಸಮಿತಿ ಗೌರವಾಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಹೊರೆಕಾಣಿಕೆ ಸಮಿತಿ ಸಂಚಾಲಕ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಪ್ರಧಾನ ಕಾರ್ಯದರ್ಶಿ ನವೀನ್ ಕುಲಾಲ್, ಉಪಾಧ್ಯಕ್ಷ ಕೃಷ್ಣ ಎಂ.ಅಳಿಕೆ,ಸಂಘಟನಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ದಿನೇಶ್ ಪಂಜಿಗ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಧನ್ಯ ಕುಮಾರ್ ಬೆಳಂದೂರು, ವಿಶ್ವನಾಥ ಗೌಡ ಬನ್ನೂರು, ಪ್ರಕಾಶ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here