ನರಿಮೊಗರು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ-ಮೆರವಣಿಗೆ

0

ಪುತ್ತೂರು: ನರಿಮೊಗರು ಸ.ಹಿ.ಪ್ರಾ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣರಾಜ ಜೈನ್ ಧ್ವಜಾರೋಹಣಗೈದು ಶುಭ ಕೋರಿದರು. ಧ್ವಜಾರೋಹಣದ ಬಳಿಕ ವಿದ್ಯಾರ್ಥಿಗಳು ಹಾಗೂ ಪೋಷಕರ ಮೆರವಣಿಗೆ ನಡೆಯಿತು.
ನಂತರ ನಿವೃತ್ತ ಶಿಕ್ಷಕಿ ಶಾರದಾ ಹಾಗೂ ವರ್ಗಾವಣೆಗೊಂಡಿರುವ ಶಿಕ್ಷಕಿ ಜುಸ್ತಿನಾ ಲಿಡ್ವಿನ್ ಡಿಸೋಜರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯಗುರು ಶ್ರೀಲತಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.


ಸ್ವಾತಂತ್ರ್ಯೋತ್ಸವಕ್ಕೆ ಪೂರ್ವಭಾವಿಯಾಗಿ ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿದ ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಮಕ್ಕಳಿಗೆ ಪಾಯಸದ ವ್ಯವಸ್ಥೆಯನ್ನು ಮಾಡಿದ್ದ ಕೆಎಂಜೆ ಎಸ್‌ಎಸ್‌ಎಫ್ ಎಸ್‌ವೈಎಸ್ ಟೀಮ್ ಇಸಾಬ ನರಿಮೊಗರು ಶಾಖೆ ಇವರ ಸೇವೆಯನ್ನು ಗೌರವಿಸಿ ಸ್ಮರಣಿಕೆ ನೀಡಲಾಯಿತು.


ಶಾಲೆಗೆ ಹೂವಿನ ಗಿಡಗಳನ್ನು ದಾನವಾಗಿ ನೀಡಿದ ಪ್ರವೀಣ್ ಪೂಜಾರಿ ಶಾಂತಿಗೋಡು ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಛದ್ಮವೇಷ ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ವಿದ್ಯಾರ್ಥಿಗಳು ಕನ್ನಡ ಇಂಗ್ಲಿಷ್ ಹಾಗೂ ತುಳು ಭಾಷೆಯಲ್ಲಿ ಮಾಡಿದ ಭಾಷಣಗಳನ್ನು ಅತಿಥಿಗಳು ಶ್ಲಾಘಿಸಿದರು.


ಸಭಾ ವೇದಿಕೆಯಲ್ಲಿ ಕೃಷ್ಣರಾಜ ಜೈನ್, ಗಂಗಾಧರ ಸುವರ್ಣ, ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಉಮೇಶ್ ಇಂದಿರಾನಗರ, ಸದಸ್ಯೆ ಪುಷ್ಪಾವತಿ, ತಾ.ಪಂ ಮಾಜಿ ಸದಸ್ಯ ಜಯರಾಮ್ ಪೂಜಾರಿ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಉಸ್ಮಾನ್ ನೆಕ್ಕಿಲು, ಉಪಾಧ್ಯಕ್ಷರಾದ ಪ್ರತಿಭಾ ಆಚಾರ್ಯ ಉಪಸ್ಥಿತರಿದ್ದರು.

ಶಾಲೆಗೆ ಸಿಹಿತಿಂಡಿ ನೀಡಿ ಸಹಕರಿಸಿದವರು:
ಸಿಹಿ ತಿಂಡಿಯನ್ನು ನೀಡಿ ಸಹಕರಿಸಿದ ದಾನಿಗಳು:-
ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪುರುಷರ ಕಟ್ಟೆ ಮುಸ್ಲಿಂ ಒಕ್ಕೂಟ, ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಪುರುಷರ ಕಟ್ಟೆ, ಅಬ್ದುಲ್ ಬಶೀರ್ ಇಂದಿರಾನಗರ, ಎ ಎಸ್ ಆರ್ ಟಿ ಸಿ ಉದ್ಯೋಗಿ ವಿಜಯ, ಗಣೇಶ್ ಪ್ರಭು ನರಿಮೊಗರು, ಮಹಾಲಿಂಗನಾಯ್ಕ ನರಿಮೊಗರು, ದಾಮೋದರ ಮರ್ತಡ್ಕ, ಗಂಗಾಧರ ಸುವರ್ಣ, ಉಮೇಶ್ ಇಂದಿರಾನಗರ, ಗಣೇಶ್ ನಾಯಕ್ ಇಂದಿರಾನಗರ ಹಾಗೂ ನರಿಮೊಗರು ಅದೇ ರೀತಿ ಶಾಲಾ ಹಿರಿಯ ವಿದ್ಯಾರ್ಥಿ ಬಳಗ ಪುರುಷರ ಕಟ್ಟೆ ಇದರ ವತಿಯಿಂದ ಧ್ವನಿವರ್ಧಕದ ವ್ಯವಸ್ಥೆಯನ್ನು ಮಾಡಿದ್ದರು.


ಈ ಸಂದರ್ಭದಲ್ಲಿ ಪಾಪೆತಡ್ಕ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಂಬಳ್ಳಿ, ಹಿರಿಯರಾದ ಮಹಮ್ಮದ್ ದರ್ಕಾಸು, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಪ್ರತಿಭಾ ಆಚಾರ್ಯ, ಸದಸ್ಯರಾದ ಸಲೀಂ ಮಾಯಂಗಳ, ಮಹಮ್ಮದ್ ಕೆ ಯು, ವಿವೇಕಾನಂದ ಭಟ್, ಸೌಮ್ಯ ರಮೇಶ್ ಕಾಳಿಂಗಹಿತ್ಲು, ನಸೀಮ ಬಾನು, ಗುಲಾಬಿ, ಸುನೀತಾ ಡಿಸೋಜಾ, ಶಶಿಕಲ, ಎಸ್ ಡಿ ಎಮ್ ಸಿ ಮಾಜಿ ಉಪಾಧ್ಯಕ್ಷೆ ಲಕ್ಷ್ಮಿ ಪ್ರವೀಣ್ ಪೂಜಾರಿ ಇಂದಿರಾನಗರ, ಮಾಜಿ ಸದಸ್ಯರಾದ ದಿನೇಶ್ ಕೈಪಂಗಳ, ಪ್ರವೀಣ್ ಆಚಾರ್ಯ ನರಿಮೊಗರು, ಅಬೂಬಕ್ಕರ್ ದರ್ಕಾಸು ಪಾಪೆತಡ್ಕ, ಉಮ್ಮರ್ ಕೆ.ಪಿ ಕಾಳಿಂಗಹಿತ್ಲು, ಅಬ್ದುಲ್ ನಾಸಿರ್ ನೆಕ್ಕಿಲು ಉಪಸ್ಥಿತರಿದ್ದರು.

ಸಹಶಿಕ್ಷಕರಾದ ಜೋಸ್ಲಿನ್ ಪಸನ್ಹ ಹಾಗೂ ದಿವ್ಯ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕರಾದ ಸುಮನ, ಸುರೇಖಾ,ಸ್ನೇಹಲತಾ, ಮಂಜುಳಾ, ಅಡುಗೆ ಸಿಬ್ಬಂದಿಗಳಾದ ಕುಸುಮ, ವಿಜಯ ಮತ್ತು ಶೀಲಾವತಿರವರು ಸಹಕರಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಮುಖ್ಯ ಶಿಕ್ಷಕಿ ಶ್ರೀಲತಾ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here