ಆಲಂಕಾರು: ಆಲಂಕಾರು ಗ್ರಾಮ ಪಂಚಾಯತ್‌ನ 2ನೇ ಅವಧಿಗೆ ಅಧ್ಯಕ್ಷರಾಗಿ ಸುಶೀಲಾ ಹಾಗೂ ಉಪಾಧ್ಯಕ್ಷರಾಗಿ ರವಿ ಪೂಜಾರಿ ಕುಂಞಲಡ್ಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರಿಬ್ಬರೂ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ.
11 ಸದಸ್ಯ ಬಲದ ಆಲಂಕಾರು ಗ್ರಾಮ ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ 11 ಸದಸ್ಯರಿದ್ದಾರೆ. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಆಲಂಕಾರು 1 ವಾರ್ಡ್‌ನಿಂದ ಬಿಜೆಪಿ ಬೆಂಬಲಿತ ಸದಸ್ಯೆಯಾಗಿ ಚುನಾಯಿತರಾಗಿದ್ದ ಸುಶೀಲ ರವರು ಆಲಂಕಾರಿನ ಕೊಂಡಾಡಿ ನಿವಾಸಿಯಾಗಿದ್ದಾರೆ ಹಾಗೂ ಸಾಮಾನ್ಯ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಆಲಂಕಾರಿನ 3 ನೇ ವಾರ್ಡ್‌ನಿಂದ ಬಿಜೆಪಿ ಬೆಂಬಲಿತ ಸದಸ್ಯರಾಗಿ ಚುನಾಯಿತರಾಗಿದ್ದ ರವಿ ಪೂಜಾರಿ ಕುಂಞಲಡ್ಡ ಅವರು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ನಡೆದಿದೆ. ಸದಸ್ಯರಾದ ಸದಾನಂದ ಆಚಾರ್ಯ, ಶ್ವೇತಾಕುಮಾರ್, ಚಂದ್ರಶೇಖರ,ಕೃಷ್ಣ ಗಾಣಂತಿ,ವಾರಿಜಾ,ಸುಮತಿ,ಸುನಂದಾ,ಶಾರದ,ರೂಪಾಶ್ರೀ, ಉಪಸ್ಥಿತರಿದ್ದರು.
ಕಡಬ ಸರಕಾರಿ ಪ.ಪೂ.ಕಾಲೇಜ್ ನ ರಾಜ್ಯಶಾಸ್ತ್ರ ಉಪನ್ಯಾಸಕ ಸಲೀನ್ ಕೆ.ಪಿ, ಚುನಾವಣಾಧಿಕಾರಿಯಾಗಿದ್ದರು. ಪಿಡಿಒ ಸುಜಾತ.ಕೆ ಕಾರ್ಯದರ್ಶಿ ವಸಂತ ಶೆಟ್ಟಿ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಕರಿಯಪ್ಪ,ಹೇಮಾವತಿ.ಕೆ, ವಸಂತ .ಜಿ.,ಮೋನಪ್ಪ, ಭವ್ಯಕುಮಾರಿ, ಸುಶ್ಮೀತಾ,ಕಮಲಾ ಸಹಕರಿಸಿದರು.
ಬಿಜೆಪಿ ಮುಖಂಡರಿಂದ ಅಭಿನಂದನೆ:
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಸುಶೀಲ ಕೊಂಡಾಡಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ರವಿಪೂಜಾರಿ ಕುಂಞಲಡ್ಡ ಅವರನ್ನು ಬಿಜೆಪಿ ಸುಳ್ಯಮಂಡಲದ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ,ರಾಜ್ಯ ಬಿ.ಜೆ.ಪಿ ರೈತ ಮೋರ್ಚ ಉಪಾಧ್ಯಕ್ಷರಾದ ಎ.ವಿ ತೀರ್ಥರಾಮ ಸುಳ್ಯಮಂಡಲ ಬಿ.ಜೆ.ಪಿ ಕಾರ್ಯದರ್ಶಿ ರಾಕೇಶ್ ರೈ ಕಡೆಂಜಿ, ಸುಬೋದ್ ಶೆಟ್ಟಿ ಮೇನಾಲ,ಸುಳ್ಯ ಮಂಡಲ ಎಸ್.ಟಿ ಮೋರ್ಚದ ಕಾರ್ಯದರ್ಶಿ ಪೂವಪ್ಪ ನಾಯ್ಕ್ ಎಸ್, ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕರಾದ ಆಶಾತಿಮ್ಮಪ್ಪ ಗೌಡ,ವೃತ್ತಿಪರ ಪ್ರಕೋಷ್ಠ ಸಂಚಾಲಕರಾದ ಸದಾಶಿವ ಶೆಟ್ಟಿ ಮಾರಂಗ,ಮಂಡಲ ಸಮಿತಿ ಸದಸ್ಯರಾದ ದಯಾನಂದ ಗೌಡ ಆಲಡ್ಕ, ಕೊಯಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಪ್ರದೀಪ್ ರೈ ಮನವಳಿಕೆ,ಕಾರ್ಯದರ್ಶಿ ಸುರೇಶ್ ಗೌಡ ದೇಂತಾರು ಬಿ.ಜೆ.ಪಿ ಬೂತ್ ಸಮಿತಿ ಅಧ್ಯಕ್ಷರಾದ ಹರೀಶ್ ಏಂತಡ್ಕ,ನವೀನ್ ಬುಡೇರಿಯಾ,ಪ್ರಮುಖರಾದ ಜಯಂತ ಪೂಜಾರಿ ನೆಕ್ಕಿಲಾಡಿ, ದಿವಾಕರ ಕುಂಬಾರ,ಶೀನಪ್ಪ ಕುಂಬಾರ,ಶೀನಪ್ಪ ಗೌಡ ಕೊಂಡಾಡಿ,ಕೇಶವ ಗೌಡ ಆಲಡ್ಕ ಹಾಗು ಇನ್ನೀತರರು ಅಭಿನಂದನೆ ಸಲ್ಲಿಸಿದರು.