ಕೊಂಡಾಡಿಕೊಪ್ಪ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿ ಪ್ರೇಮಾರವರಿಗೆ ಬೀಳ್ಕೊಡುಗೆ

0

ಕಾಣಿಯೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಾಡಿಕೊಪ್ಪದಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಕುಂಡಾಜೆ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡ ಪ್ರೇಮಾ ಬಿ ಯವರಿಗೆ ಬೀಳ್ಕೊಡುಗೆ ಸಮಾರಂಭವು ಇತ್ತೀಚೆಗೆ ನಡೆಯಿತು.

ಶಾಲಾ ವತಿಯಿಂದ ಪ್ರೇಮಾ ಬಿ ಯವರಿಗೆ ಶಾಲು ಸ್ಮರಣಿಕೆ ಫಲ ತಾಂಬೂಲ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೀನಪ್ಪ ಕುಂಬಾರ, ಮಾತೃಶ್ರೀ ಭಜನಾ ಮಂಡಳಿ ಕೊಂಡಾಡಿಕೊಪ್ಪ ಇದರ ಅಧ್ಯಕ್ಷರಾದ ದಿವಾಕರ ಕುಂಬಾರ ಕೊಂಡಾಡಿಕೊಪ್ಪ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಲತಾ ಶರವೂರು, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ನೋಣಯ್ಯ ಏಂತಡ್ಕ, ಗಣೇಶ ಪೂಜಾರಿ ಕೊಂಡಾಡಿ, ಆಶಾ ಕೊಂಡಾಡಿಕೊಪ್ಪ, ರತ್ನಾವತಿ ಕೊಂಡಾಡಿಕೊಪ್ಪ, ವೇದಾವತಿ ಕೊಂಡಾಡಿಕೊಪ್ಪ, ಚಂದ್ರಶೇಖರ ಕೊಂಡಾಡಿಕೊಪ್ಪ, ದೀಪಾ ಗುಮ್ಮಗೊಳಮಠ, ನಿತ್ಯಾನಂದ ನಾಡ್ತಿಲ, ರೇವತಿ ಶರವೂರು, ಪುಷ್ಪಾವತಿ ಕಮಿತ್ತಿಲು, ಪೋಷಕರಾದ ಸುನಂದಾ ಕೊಂಡಾಡಿಕೊಪ್ಪ, ಪ್ರೇಮಾ ಕೊಂಡಾಡಿಕೊಪ್ಪ, ಹಿರಿಯ ವಿದ್ಯಾರ್ಥಿ ಲಿಖಿತಾ ಅಡುಗೆ ಸಿಬ್ಬಂದಿ ಯಶೋಧ, ಶಾಲಾ ನಾಯಕ ಯಶಸ್ ಉಪಸ್ಥಿತರಿದ್ದರು.ಪ್ರೇಮಾ ಬಿ ರವರು ತನ್ನ ಸೇವಾವಧಿಯಲ್ಲಿ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.ಶಾಲಾ ಮುಖ್ಯಗುರು ಜಯಂತ್ ವೈ ಸ್ವಾಗತಿಸಿ, ಸಹಶಿಕ್ಷಕಿ ಅಶ್ವಿನಿ ವಂದಿಸಿದರು.

LEAVE A REPLY

Please enter your comment!
Please enter your name here