ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಮಧ್ಯಂತರ ಕ್ಷೇತ್ರ ಪ್ರತಿನಿಧಿ ಸಭೆ ನೂತನ ಸಮಿತಿ ರಚನೆ-ಅಧ್ಯಕ್ಷರಾಗಿ ಇಬ್ರಾಹಿಂ ಸಾಗರ್ ಪುನರಾಯ್ಕೆ

0

ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರದ ಮಧ್ಯಂತರ ಕ್ಷೇತ್ರ ಪ್ರತಿನಿಧಿ ಸಭೆಯು ಆ.18ರಂದು ಪುತ್ತೂರು ಲಯನ್ಸ್ ಸಭಾಂಗಣದಲ್ಲಿ ನಡೆಯಿತು.


ಕಳೆದ 2 ವರ್ಷಗಳ ಪಕ್ಷದ ಕಾರ್ಯ ಚಟುವಟಿಕೆಗಳ ಬಗ್ಗೆ ಕ್ಷೇತ್ರ ಸಮಿತಿ ಪ್ರ.ಕಾರ್ಯದರ್ಶಿ ಅಬ್ದುಲ್ ರಹಿಮಾನ್ ವರದಿ ಮಂಡಿಸಿದರು. ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ನಾಯಕತ್ವದ ಬಗ್ಗೆ ತರಬೇತಿ ನೀಡಿದರು. ಪುತ್ತೂರು ಕ್ಷೇತ್ರ ಸಮಿತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಯಿತು.
ಅಧ್ಯಕ್ಷರಾಗಿ ಇಬ್ರಾಹಿಂ ಸಾಗರ್, ಪ್ರ.ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಪುತ್ತೂರು, ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಸಾಲ್ಮರ ಅವರನ್ನು ಮುಂದುವರಿಸಲಾಯಿತು. ಖಜಾಂಜಿಯಾಗಿ ವಿಶ್ವನಾಥ್ ಪುಣ್ಚತ್ತಾರು, ಜತೆಕಾರ್ಯದರ್ಶಿಯಾಗಿ ಅಬ್ದುರ್ರಹಿಮಾನ್ (ಅದ್ದು) ಕೊಡಿಪ್ಪಾಡಿ, ಮತ್ತು ಮುಸ್ತಫ ಡಿ.ಬಿ.ಯವರು ಆಯ್ಕೆ ಮಾಡಲಾಯಿತು.

ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಮದ್ದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ಕ್ಷೇತ್ರ ಸಮಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೆ.ಎ ಸಮಾರೋಪ ಭಾಷಣಗೈದರು. ಅಬ್ದುಲ್ ಹಮೀದ್ ಸಾಲ್ಮರ ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಲ್ ರಹಮಾನ್ ಕೊಡಿಪ್ಪಾಡಿ ವಂದಿಸಿದರು.

LEAVE A REPLY

Please enter your comment!
Please enter your name here