ನೆಲ್ಲಿಕಟ್ಟೆ ಸ.ಹಿ.ಪ್ರಾ.ಶಾಲೆಯ ಜಾಗ ಅತಿಕ್ರಮಣ ದೂರು

0

ಪುತ್ತೂರು: ನೆಲ್ಲಿಕಟ್ಟೆ ಸ.ಹಿ.ಪ್ರಾ. ಶಾಲೆಯ ಜಾಗವನ್ನು ಶಾಲೆಯ ನಾಲ್ಕು ಕಡೆಯಿಂದಲೂ ಅತಿಕ್ರಮಣ ಮಾಡಲಾಗಿದೆ. ಈ ನಿಟ್ಟಿನಲ್ಲಿ ಜಾಗದ ಅಳತೆ ಮಾಡಿಸುವಂತೆ ಶಾಲೆಯ ಎಸ್‌ಡಿಎಂಸಿ ಮತ್ತು ಮುಖ್ಯಗುರುಗಳು ಪುತ್ತೂರು ನಗರಸಭೆಗೆ ದೂರು ನೀಡಿದ್ದಾರೆ.

ಪ್ರಸ್ತುತ ಖಾಸಗಿ ಬಸ್ ನಿಲ್ದಾಣದ ರಸ್ತೆಯ ಬಳಿಯ ಅನೀತಾ ಆಯಿಲ್ ಮಿಲ್ ಪಕ್ಕ ದೊಡ್ಡದಾಗ ಗುಂಡಿಯನ್ನು ತೆಗೆದು ಅಲ್ಲಿ ಅತಿಕ್ರಮಣ ಕಟ್ಟಡವನ್ನು ಕಟ್ಟುತ್ತಿರುವುದು ಕಂಡು ಬಂದಿದೆ. ಈ ಕುರಿತು ತಕ್ಷಣ ಕಾಮಗಾರಿಯನ್ನು ನಿಲ್ಲಿಸಿ, ಶಾಲೆಗೆ ನ್ಯಾಯ ಒದಗಿಸುವಂತೆ ಶಾಲೆಯಿಂದ ದೂರಿನಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here