ಪುತ್ತೂರು: ಪುತ್ತೂರು ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕಿನ ಐಸ್ಕ್ರೀಮ್ ಉತ್ಪಾದನಾ ಮಾಲಕರ ಸಭೆಯು ಆ.20ರಂದು ಪುತ್ತೂರು ಸ್ವಾಗತ ಹೊಟೇಲ್ನ ಸಭಾಂಗಣದಲ್ಲಿ ನಡೆದು ಐಸ್ಕ್ರೀಮ್ ಉತ್ಪನ್ನಗಳ ಬೆಲೆ ಏರಿಕೆಯ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಹಾಲಿನ ದರ ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಐಸ್ಕ್ರೀಮ್ ತಯಾರಕರು ಬಹಳ ಕಷ್ಟ ಅನುಭವಿಸುತ್ತಿದ್ದು ಐಸ್ಕ್ರೀಮ್ ಉತ್ಪನ್ನಗಳ ಬೆಲೆ ಏರಿಸುವ ಬಗ್ಗೆ ಚರ್ಚಿಸಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಉಪ್ಪಿನಂಗಡಿ ಫ್ಲೇವರ್ಸ್ ಐಸ್ಕ್ರೀಮ್ ಮಾಲಕ ಸಚಿನ್ ಎ.ಎಸ್., ಉಜಿರೆಯ ಸುಹನ ಐಸ್ಕ್ರೀಮ್ ಮಾಲಕ ಸತೀಶ್, ಬೆಳ್ತಂಗಡಿ ಪ್ರಭಾ ಐಸ್ಕ್ರೀಂ ಮಾಲಕ ಪ್ರಭಾಚಂದ್ರ, ಪುತ್ತೂರು ಶಕ್ತಿ ಐಸ್ಕ್ರೀಮ್ ಮಾಲಕ ಕರುಣಾಕರ ರೈ, ಸುಳ್ಯ ನಾಯಕ್ಸ್ ಐಸ್ಕ್ರೀಂ ಮಾಲಕ ಚಂದ್ರಶೇಖರ, ಪುತ್ತೂರು ಮಹಾಲಕ್ಷ್ಮಿ ಕೋಲ್ಡ್ ಹೌಸ್ ಮಾಲಕ ಪಿ.ಜಯಂತ ಭಂಡಾರಿ, ಸುಳ್ಯ ಸ್ವಾಗತ ಐಸ್ಕ್ರೀಮ್ ಮಾಲಕ ಪ್ರಭಾಕರನ್ ನಾಯರ್, ಸುಳ್ಯ ವಿನಯ ಐಸ್ಕ್ರೀಮ್ ಮಾಲಕ ರಾಜೇಶ್ ಕೆದಿಲಾಯ, ಪುತ್ತೂರು ಕೊಝಿ ಐಸ್ಕ್ರೀಂ ಮಾಲಕ ಕೆ.ದಿವಾಕರ ಸೇರಿದಂತೆ ಹಲವರು ಮಾತನಾಡಿ ಐಸ್ಕ್ರೀಮ್ ತಯಾರಕರು ಎದುರಿಸುತ್ತಿವ ಸಮಸ್ಯೆಗಳ ಬಗ್ಗೆ ಮಾತನಾಡಿದರು.