ಪುತ್ತೂರು: ಕಳೆದ 13 ವರ್ಷಗಳಿಂದ ಬೊಳುವಾರು ಸರಕಾರಿ ಹಿ.ಪ್ರಾ ಶಾಲೆಯಲ್ಲಿ ಪ್ರಭಾರ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿಗೊಂಡ ನಿವೇದಿತಾರವರಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಶಾಲೆಯ ನಲಿ-ಕಲಿ ಕೊಠಡಿಗೆ ದಾನಿಗಳು ಕೊಡುಗೆಯಾಗಿ ನೀಡಿದ ಮೇಜಿನ ಉದ್ಘಾಟನೆ ಅ.19ರಂದು ಶಾಲೆಯಲ್ಲಿ ನಡೆಯಿತು.
ಶಾಲೆಯ ಪ್ರಭಾರ ಮುಖ್ಯಗುರು ಸವಿತಾ ಸಿ.ಎ.ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶಾಲಾ ಹಿರಿಯ ವಿದ್ಯಾರ್ಥಿಗಳಾದ ಆಸ್ಕರ್ ಆನಂದ್, ಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಅಜೀರ, ಜಬ್ಬಾರ್, ಜೋಯಲ್ ಕುಟಿನ್ಹೊ, ಹರಿಪ್ರಸಾದ್ ಹೊಟೇಲ್‌ನ ಮಾಲಕರಾದ ಹರಿನಾರಾಯಣ ಹೊಳ್ಳರವರು ನಲಿ-ಕಲಿ ಕೊಠಡಿಗೆ 5 ಮೇಜುಗಳನ್ನು ಕೊಡುಗೆಯಾಗಿ ನೀಡಿದರು. ನಿವೃತ್ತಿಗೊಂಡ ಪ್ರಭಾರ ಮುಖ್ಯಗುರು ನಿವೇದಿತಾರವರನ್ನು ಶಾಲು, ಫಲವಸ್ತು, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ತಾನು ಗೌರವ ಶಿಕ್ಷಕಿಯಾಗಿ ದುಡಿದ ಶಾಲೆಯಲ್ಲಿಯೇ ನಿವೃತ್ತಿಯಾಗುತ್ತಿರುವುದು ತುಂಬಾ ಸಂತೋಷವನ್ನುಂಟುವಾಗಿದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಶಾಲಾ ವಿದ್ಯಾರ್ಥಿ ಫಾತಿಮತ್ ಹಫೀದಾ, ಆಶಾ ಕಾರ್ಯಕರ್ತೆ ಮೀನಾಕ್ಷಿ, ನರ್ಸ್ ನಿಶಾರವರು ನೆನಪಿನ ಕಾಣಿಕೆ ನೀಡಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷೆ ರೇಷ್ಮಾ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಗುರು ಸವಿತಾ ಸಿ.ಎ., ನಿವೇದಿತಾ, ಆಸ್ಕರ್ ಆನಂದ್, ದಯಾನಂದರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್‌ಡಿಎಂಸಿ ಉಪಾಧ್ಯಕ್ಷರಾದ ಅಝೀಜ್ ಬಿ.ಆರ್., ರೊಟೇರಿಯನ್ ಅಧ್ಯಕ್ಷ ಅಬ್ದುಲ್ ರಝಾಕ್ ಕಬಕ, ವಿ.ಕೆ. ಸ್ಟೀಲ್‌ನ ವಸಂತ್, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಸಹಶಿಕ್ಷಕಿ ಮೋನಿಕಾ ಪಿ. ಮಾಡ್ತಾ ಧನ್ಯವಾದಗೈದರು, ಮಲ್ಲಿಕಾ ಬಿ. ಕಾರ್ಯಕ್ರಮ ನಿರೂಪಿಸಿದರು., ಸಭೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಶಾಲಾ ಹಿರಿಯ ವಿದ್ಯಾರ್ಥಿಗಳಾದ ನಗರಸಭಾ ಸದಸ್ಯ ಸಂತೋಷ್‌ಕುಮಾರ್, ಪ್ರವೀಣ್ ನಾಯಕ್ ಮಾಡಿದ್ದರು.