ಹಿಂದುಗಳ ಪವಿತ್ರ ಹಬ್ಬ (ಆ. 21) ನಾಗರ ಪಂಚಮಿ

0

ಕರಾವಳಿ ತುಳುನಾಡಿನಲ್ಲಿ ನಾಗ ಆದಿ ದೈವವಾಗಿದ್ದು, ನಾಗಾರಾಧನೆ ವೈವಿಧ್ಯಮಯ ಆರಾಧನಾ ವಿಧಿಗಳು ರೂಢಿಯಲ್ಲಿದೆ. ಪ್ರಕೃತಿಯನ್ನೇ ದೇವರೆಂದು ಪೂಜಿಸುವ ಹಿಂದೂ ಧರ್ಮದ ಶ್ರೇಷ್ಠತೆಯು ನಾಗರಪಂಚಮಿಯ ಆಚರಣೆಯಿಂದ ತಿಳಿಯುತ್ತದೆ.ತುಳುನಾಡಿನ ಬಹುತೇಕ ನಾಗಬನಗಳ ಹತ್ತಿರ ನಾಗದೇವತೆಯ ಮೂರ್ತಿಯನ್ನು ಸ್ಥಾಪಿಸಿ ಅದನ್ನು ಪೂಜೆ ಮಾಡುವ ಪರಂಪರೆಯಿದೆ. ಮನೆಗಳ ಹತ್ತಿರದಲ್ಲಿಯೇ ನಾಗಬನಗಳಿದ್ದರೂ ನಾಗಗಳಿಂದ ಯಾರಿಗೂ ಯಾವುದೇ ರೀತಿಯ ತೊಂದರೆಗಳಾಗುವುದಿಲ್ಲ ಎಂಬುದೇ ನಾಗಗಳ ವೈಶಿಷ್ಟ್ಯ.

ತುಳುನಾಡಿನ ಮೂಲ ನಾಗಮೂಲ ಎಂದು ಅನೇಕ ವಿದ್ವಾಂಸರ ವಾದ. ಈ ನೆಲ, ಜಲ ಹಾಗೂ ನಾವುನ್ನುವ ಅನ್ನ ನಾಗನಿಂದ ಬಳುವಳಿಯಾಗಿ ಬಂದಿರುವುದರಿಂದಲೇ ನಮ್ಮ ಪೂಜೆಯಲ್ಲಿ ನಾಗನಿಗೂ ಮಹತ್ವ ನೀಡಲಾಗಿದೆ.ನಾಗರಪಂಚಮಿ ತನು ತಂಬಿಲ ಸೇವೆ ಶ್ರದ್ದೆ, ಭಯಭಕ್ತಿಯಿಂದ ಆಚರಣೆ. ನಮ್ಮ ನಾಗದೇವರು ತಂಪನ್ನು ಬಯಸುವ, ತಂಪಾದ ಪರಿಸರದಲ್ಲಿ ವಾಸಿಸುವ ಸರೀಸೃಪ. ಆದುದರಿಂದಲೇ ನಾಗನಿಗೆ ತನು ಎರೆಯುತ್ತೇವೆ.

ನಾವು ತಂಪೆಂದು ಭಾವಿಸಿರುವ ಹಾಲು, ಸೀಯಾಳ ಎರೆಯುತ್ತೇವೆ. ಈ ತನು ಅರ್ಪಣೆಯ ಕ್ರಮ ಪುರಾತನವಾದುದು.ನಾಗರ ಪಂಚಮಿಯ ದಿನದಂದು ಅರಶಿಣ ಎಲೆಯಲ್ಲಿ ಮಾಡಿದ ಗಟ್ಟಿ ತಯಾರಿಸುವುದು ಎಲ್ಲಾ ಕಡೆಯಲ್ಲಿ ವಾಡಿಕೆಯಾಗಿದೆ.ಹಾಗೆಯೇ ಮಾನವನ ವಿಕೃತಿಗಳಿಂದಾಗಿ ನಮ್ಮ ಬನಗಳು ನಾಶವಾಗುತ್ತಿವೆ. ಸಾವಿರಾರು ಬನಗಳು ಈಗಾಗಲೇ ನಾಶವಾಗಿವೆ, ಉಳಿದಿರುವ ಸಾವಿರಾರು ಬನಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ.

ಒಮ್ಮೆ ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ವರವನ್ನು ಕೇಳು ಎಂದು ಹೇಳಿದಾಗ, ಆಸ್ತಿಕನು ಸರ್ಪಗಳ ಆಹುತಿತೆಗೆದು ಸರ್ಪನಾಶಗೈಯುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಸರ್ಪಯಜ್ಞವನ್ನು ನಿಲ್ಲಿಸಿದ ದಿನವು ಪಂಚಮಿಯಾಗಿತ್ತು. ಆದುದರಿಂದ ಆ ದಿನವನ್ನು ಶ್ರದ್ಧಾ ಭಕ್ತಿಗಳಿಂದ ನಾಗರಪಂಚಮಿ ಆಚರಿಸುತ್ತೇವೆ.
ಹರ್ಷಿತಾ ಹರೀಶ್ ಕುಲಾಲ್

LEAVE A REPLY

Please enter your comment!
Please enter your name here