ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ವಿಖಾಯ ವತಿಯಿಂದ ಕೆದಂಬಾಡಿ ಶಾಲಾ ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ

0

ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ವಿಖಾಯದ ಆಶ್ರಯದಲ್ಲಿ ಕೆದಂಬಾಡಿ ಸ.ಹಿ.ಪ್ರಾ. ಶಾಲಾ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ವಿಖಾಯ ಕನ್ವಿನರ್ ಅಶ್ರಫ್ ಸಾರೆಪುಣಿ ನೇತೃತ್ವದಲ್ಲಿ ನಡೆಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಇಕ್ಬಾಲ್ ಎಚ್.ಎ ಸಾರೆಪುಣಿ, ಉಸ್ಮಾನ್ ಸಾರೆಪುಣಿ, ಆಸೀಫ್ ಸಾರೆಪುಣಿ, ಝಕರಿಯ, ಉನೈಸ್ ಸಾರೆಪುಣಿ, ಫಾಯಿಝ್ ಸಾರೆಪುಣಿ, ನವಾಝ್ ಸಾರೆಪುಣಿ, ಸರ್ಪುದ್ದೀನ್ ಸಾರೆಪುಣಿ, ಮುಝಮ್ಮಿಲ್ ಸಾರೆಪುಣಿ, ಡಿ.ಎ ಬಶೀರ್ ಗಟ್ಟಮನೆ, ಮಜೀದ್ ದಾರಿಮಿ ಗಟ್ಟಮನೆ ಭಾಗವಹಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದವರಿಗೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬಶೀರ್ ಬೂಡಿಯರ್ ಅವರು ಉಪಹಾರದ ವ್ಯವಸ್ಥೆ ಮಾಡಿದರು. ಎಸ್‌ಡಿಎಂಸಿ ಸದಸ್ಯರೂ, ಕೆದಂಬಾಡಿ ಗ್ರಾ.ಪಂ ಸದಸ್ಯರೂ ಆದ ಕೃಷ್ಣ ಕುಮಾರ್, ಎಸ್‌ಡಿಎಂಸಿ ಸದಸ್ಯೆ ನೀತಿತಾ ಅವರು ಭೇಟಿ ನೀಡಿ ಸಲಹೆ ಸೂಚನೆ ನೀಡಿದರು. ಶಾಲಾ ಮುಖ್ಯಗುರು ನಾಗವೇಣಿ ಅವರು ರಜಾ ದಿನವಾದರೂ ಕೂಡಾ ಸ್ವಚ್ಛತಾ ತಂಡದೊಂದಿಗೆ ಕೆಲಸ ಕಾರ್ಯಗಳು ಮುಗಿಯುವ ವರೆಗೆ ನಿಂತು ಸಲಹೆ ಸೂಚನೆ ನೀಡಿದರು.

ಸ್ವಚ್ಛತಾ ಕಾರ್ಯಕ್ರಮ ನಡೆಯುವಾಗ ವಲಯ ಕಾರ್ಯದರ್ಶಿ ಯಾಸಿರ್ ಕೌಸರಿ, ಉಪಾಧ್ಯಕ್ಷ ಇಬ್ರಾಹಿಂ ಹಾಜಿ, ಈಸ್ಟ್ ಜಿಲ್ಲಾ ವಿಖಾಯ ಚೇರ್ಮನ್ ಮನ್ಸೂರ್ ಮೌಲವಿ ಅಮ್ಚಿನಡ್ಕ ಭೇಟಿ ನೀಡಿದರು. ಶಾಲಾ ಬಿಸಿ ಊಟ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯಕ್ರಮ ಮಾಡಿದವರಿಗೆ ಊಟೋಪಚಾರ ಮಾಡಿ ಕೊಟ್ಟು ಸಹಕರಿಸಿದರು.
ಈ ಸಂದರ್ಭದಲ್ಲಿ ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ವಿಖಾಯ ಕನ್ವಿನರ್ ಅಶ್ರಫ್ ಸಾರೆಪುಣಿ ಮಾತನಾಡಿ ಶಾಲಾ ಪರಿಸರದಲ್ಲಿ ಹುಲ್ಲು, ಗಿಡಗಂಟಿ ಬೆಳೆದು ಮಕ್ಕಳಿಗೆ ತೊಂದರೆಯಾಗುತ್ತಿರುವ ಬಗ್ಗೆ ನಮಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ನಾವು ಶಾಲೆಗೆ ಭೇಟಿ ನೀಡಿದ್ದು, ಈ ವೇಳೆ ಶಾಲಾ ಪರಿಸರವೇ ಅಸ್ತವ್ಯಸ್ತವಾಗಿದ್ದು ಮರದ ಗೆಲ್ಲುಗಳು ವಾಲಿಕೊಂಡು ಪರಿಸರವೇ ಕತ್ತಲೆಯಂತಿತ್ತು. ಅಲ್ಲದೇ ಮಕ್ಕಳು ಶೌಚಾಲಯಕ್ಕೆ ಹೋಗಲು ಹೆದರುವಂತ ಪರಿಸ್ಥಿತಿ ಇತ್ತು. ಶಾಲಾ ಶಿಕ್ಷಕರು ನಮಗೆ ಎಲ್ಲ ಮಾಹಿತಿ ನೀಡಿದರು. ಬಳಿಕ ವಿಖಾಯ ಸದಸ್ಯರು ಸೇರಿಕೊಂಡು ಸ್ವಚ್ಛತೆ ಮಾಡಿದ್ದೇವೆ, ಇಂತಹ ಸಾಮಾಜಿಕ ಸೇವೆ ಮಾಡಲು ನಾವು ಯಾವತ್ತೂ ಹಿಂಜರಿಯುವುದಿಲ್ಲ. ನಮ್ಮ ಸೇವೆ ನಿರಂತರ ಎಂದು ಹೇಳಿದರು.

LEAVE A REPLY

Please enter your comment!
Please enter your name here