ಕಾಣಿಯೂರು: ತೆಲಂಗಾಣ ರಾಜ್ಯದ ಬಿಜೆಪಿಯ ಚುನಾವಣಾ ಸಿದ್ಧತೆ ಹಾಗೂ ಸಂಘಟನಾ ಚಟುವಟಿಕೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭಾಗವಹಿಸಿದ್ದರು. ಬಿಜೆಪಿ ವರಿಷ್ಠರ ಸೂಚನೆಯ ಮೇರೆಗೆ ತೆಲಂಗಾಣದ ಪಕ್ಷ ಸಂಘಟನೆ ಹಾಗೂ ಚುನಾವಣಾ ಸಿದ್ಧತೆಗಾಗಿ ರಾಜ್ಯದ ಬಿಜೆಪಿ ಶಾಸಕರು ತೆರಳಿದ್ದಾರೆ. ಆ.19ರಂದು ತೆಲಂಗಾಣಕ್ಕೆ ತೆರಳಿರುವ ಭಾಗೀರಥಿ ಅವರು ಕೆಲವು ದಿನ ತೆಲಂಗಾಣದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ತೆಲಂಗಾಣದ ಬೆಳ್ಳಂಪಲ್ಲಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹಾಗೂ ಚುನಾವಣಾ ಸಿದ್ಧತೆಗಳ ಕುರಿತ ಸಭೆಯಲ್ಲಿ ಭಾಗವಹಿಸಿ ಸ್ಥಳೀಯ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದ ವಿವಿಧ ಭಾಗಗಳಿಂದ ಬಿಜೆಪಿ ಶಾಸಕರು ಹಾಗೂ ಮುಖಂಡರು ತೆಲಂಗಾಣಕ್ಕೆ ತೆರಳಿದ್ದಾರೆ.