ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ

0

ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ-ಫೌಝಿಯಾ ಇಬ್ರಾಹಿಂ
ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ-ರಾಮ ಮೇನಾಲ
ಸಣ್ಣ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಮಾಡಿದ ತೃಪ್ತಿ ನನಗಿದೆ-ರಮೇಶ್ ರೈ

ಪುತ್ತೂರು: ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷಳಾಗಿ ನಾನು ಆಯ್ಕೆಗೊಂಡಿದ್ದು ಅದಕ್ಕಾಗಿ ನಾನು ಪಕ್ಷದ ಬೆಂಬಲಿತ ಗ್ರಾ.ಪಂ ಸದಸ್ಯರಿಗೆ, ನಾಯಕರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಅಧ್ಯಕ್ಷರಾಗಿ ಆಯ್ಕೆಗೊಂಡ ಫೌಝಿಯಾ ಇಬ್ರಾಹಿಂ ತಿಳಿಸಿದ್ದಾರೆ. ನೆ.ಮುಡ್ನೂರಿನಲ್ಲಿ ಕಾಂಗ್ರೆಸ್ ಕಟ್ಟಿಟ್ಟ ಬುತ್ತಿ, ಅದನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿಯವರು ಸೋಲುವ ಭೀತಿಯಿಂದ ಪ್ರತಿಭಟನೆ ಮಾಡಿದ್ದು ಚುಣಾವಣಾಧಿಕಾರಿಯವರು ಸರಿಯಾದ ರೀತಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ನೆ.ಮುಡ್ನೂರಲ್ಲಿ ಕಾಂಗ್ರೆಸ್ ಶಕ್ತಿಯುತವಾಗಿದ್ದು ಅದಕ್ಕೆ ಹುಳಿಹಿಂಡುವ ಕೆಲಸ ಯಾರು ಮಾಡಿದರೂ ಅದರಲ್ಲಿ ಯಶಸ್ಸು ಸಿಗಲು ಸಾಧ್ಯವಿಲ್ಲ. ನಾನು ಅಧ್ಯಕ್ಷಳಾಗಿ ಮುಂದಿನ ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಸರ್ವತೋಮುಖ ಅಭಿವೃದ್ಧಿ ಮಾಡಲು ಶ್ರಮಿಸುತ್ತೇನೆ ಎಂದು ಅವರು ಹೇಳಿದರು.

ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ-ರಾಮ ಮೇನಾಲ
ಉಪಾಧ್ಯಕ್ಷರಾಗಿ ಆಯ್ಕೆಗೊಂಡ ರಾಮ ಮೇನಾಲ ಮಾತನಾಡಿ ನೆ.ಮುಡ್ನೂರು ಗ್ರಾ.ಪಂ ಎರಡನೇ ಅವಧಿಯ ಉಪಾಧ್ಯಕ್ಷನಾಗಿ ಸದಸ್ಯರ ಬೆಂಬಲದಿAದ ನಾನು ಆಯ್ಕೆಯಾಗಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಗೊಂದಲ ಇಲ್ಲದೇ ಪಕ್ಷದ ವರಿಷ್ಠರು ನನ್ನನ್ನು ಆಯ್ಕೆ ಮಾಡಿದ್ದಾರೆ. ನನ್ನ ಎರಡೂವರೆ ವರ್ಷದ ಅವಧಿಯಲ್ಲಿ ಜಾತ್ಯಾತೀತ ಮನೋಭಾವದೊಂದಿಗೆ ಎಲ್ಲರನ್ನು ಜೊತೆ ಸೇರಿಸಿಕೊಂಡು ಗ್ರಾ.ಪಂನ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ, ಜನರ ಬೇಡಿಕೆಗಳನ್ನು ಈಡೇರಿಸಲು ಬದ್ದನಾಗಿದ್ದೇನೆ ಎಂದು ಅವರು ಹೇಳಿದರು.

ಸಣ್ಣ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಮಾಡಿದ ತೃಪ್ತಿ ನನಗಿದೆ-ರಮೇಶ್ ರೈ
ನೆ.ಮುಡ್ನೂರು ಗ್ರಾ.ಪಂ ನಿರ್ಗಮನ ಅಧ್ಯಕ್ಷ ರಮೇಶ್ ರೈ ಸಾಂತ್ಯ ಮಾತನಾಡಿ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಅದರಲ್ಲೂ ಕೊರೋನಾ ಸಂಕಟದ ಸಂದರ್ಭದಲ್ಲಿ ಉತ್ತಮವಾಗಿ ನಿಭಾಯಿಸಿ ಯಶಸ್ಸು ಕಂಡಿದ್ದು ಆ ಬಳಿಕದ ಸಣ್ಣ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ತೃಪ್ತಿ ನನಗಿದೆ. ಮುಂದಕ್ಕೆ ಅಧ್ಯಕ್ಷೆ ಫೌಝಿಯಾ ಮತ್ತು ಉಪಾಧ್ಯಕ್ಷ ರಾಮ ಮೇನಾಲ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡಲಿದ್ದಾರೆ. ನಮ್ಮೊಂದಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.

LEAVE A REPLY

Please enter your comment!
Please enter your name here