ಮುಂಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ-ವಿಟ್ಲ ಆಲ್‌ ಇಂಡಿಯಾ Shito-ryo Karate-do union ತಂಡಕ್ಕೆ ಹಲವು ಪ್ರಶಸ್ತಿ

0

ಪುತ್ತೂರು: ಮುಂಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಟ್ಲ ಆಲ್‌ ಇಂಡಿಯಾ Shito-ryo Karate-do union ತಂಡದ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಶೋಟೊಕನ್ ಕರಾಟೆ-ಡೊ ಫೆಡರೆಷನ್ ಇವರ ಆಶ್ರಯದಲ್ಲಿ ಮರಾಠ ಮಂಡಲ್ ಹಾಲ್ ಮುಲುಂದ್ ಮುಂಬೈ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಇಂಡಿಪೆನ್‌ಡೆನ್ಸ್‌ ಕಪ್‌ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು 12 ಪ್ರಥಮ ಸ್ಥಾನ 7 ದ್ವಿತೀಯ 8 ತೃತೀಯ ಸ್ಥಾನಗಳಿಸಿದ್ದಾರೆ ಹಾಗೂ ಉತ್ತಮ ತಂಡ ಪಶಸ್ತಿಯನ್ನು ಪಡಕೊಂಡಿದ್ದಾರೆ.


ವಿಜೇತ ವಿದ್ಯಾರ್ಥಿಗಳಾದ ವಿಠಲ ಪದವಿ ಪೂರ್ವ ಕಾಲೇಜಿನ ಭವಿಷ್ ಕಟಾ ,ಕುಮಿಟೆಯಲ್ಲಿ ಪ್ರಥಮ,ಜನಪ್ರಿಯ ಸೆಂಟ್ರಲ್ ಸ್ಕೂಲ್ ಕಂಬಳಬೆಟ್ಟಿನ ಮಹಮ್ಮದ್ ಮನಾಫ್ ಕಟಾ ,ಕುಮಿಟೆಯಲ್ಲಿ ಪ್ರಥಮ ಮತ್ತು ಮಹಮ್ಮದ್ ರಾಯಿಫ್ ಕಟಾ-ದ್ವಿತೀಯ ಕುಮಿಟೆ-ದ್ವೀತೀಯ, ಮೌಂಟ್ ಕಾರ್ಮೆಲ್ ಶಾಲೆಯ ಆರೋನ್ ಕೆಲ್ವಿನ್ ಡಿಸೋಜ ಕಟಾ-ಪ್ರಥಮ ಕುಮಿಟೆ-ದ್ವಿತೀಯ, ವಿಠಲ್ ಜೇಸಿಸ್ ಶಾಲೆಯ ಸಿ ಪ್ರಥಮ್ ಕಾಮತ್ ಕಟಾ-ಪ್ರಥಮ, ಕುಮಿಟೆ-ಪ್ರಥಮ,ಷಣ್ಮುಖ ಭಟ್ ಕಟಾ-ಪ್ರಥಮ,ಧ್ರುವ ಕಟಾ-ದ್ವಿತೀಯ, ಕುಮಿಟೆ-ತೃತೀಯ,ಸಾನ್ವಿ ಕಟಾ-ಪ್ರಥಮ ಕುಮಿಟೆ-ದ್ವಿತೀಯ,ಸರಕಾರಿ ಶಾಲೆ ವಿದ್ಯಾಗಿರಿ ಪಡಿಬಾಗಿಲು ಶಾಲೆಯ ಹಿತಾಶ್ರೀ ಕಟಾ-ತೃತೀಯ ಕುಮಿಟೆ-ಪ್ರಥಮ, ನಿತ್ಯಾದರ ಆಂಗ್ಲ ಮಾಧ್ಯಮ ಶಾಲೆಯ ರೆನಿಶಾ ಡಿಸೋಜ ಕಟಾ-ತೃತೀಯ ಕುಮಿಟೆ-ತೃತೀಯ,ಸಂತ ರೀಟಾ ಶಾಲೆಯ ಮೋಹಕ್ ಡಿ ಆರ್ ಕಟಾ-ದ್ವಿತೀಯ, ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ರಿಶೋನ್ ಲಸ್ರಾದೊ ಕಟಾ-ಪ್ರಥಮ ಕುಮುಟೆ-ಪ್ರಥಮ,ರಿಯೋನ್ ಲಸ್ರಾದೊ ಕಟಾ-ದ್ವಿತೀಯ, ಸಂತ ಅಲೋಶಿಯಸ್‌ ಮಹಮ್ಮದ್ ಇಬ್ರಾಹಿಂ ಝಿಶಾನ್ ಕಟಾ-ತೃತೀಯ ಕುಮಿಟೆ-ದ್ವಿತೀಯ ಮತ್ತು ಪ್ರತೀಕ್ ಶೆಟ್ಟಿ ಕಟಾ-ತೃತೀಯ ಕುಮಿಟೆ-ಪ್ರಥಮ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಸೆನ್ಸಾಯಿ ಮಾಧವ ಅಳಿಕೆ ಮತ್ತು ಸೆನ್ಸಾಯಿ ವಿಕ್ಟರ್ ಡಿಸೋಜ, ದಿಲೀಪ್,ರೋಹಿತ್ ಎಸ್‌ ಎನ್,ನಿವೇದಿತಾ,ನಿಖಿಲ್ ಕೆ.ಟಿ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here