ಬಡಗನ್ನೂರಿನಲ್ಲಿ ವ್ಯಕ್ತಿಯೊಬ್ಬರಿಂದ ಮಹಿಳೆಯರಿಬ್ಬರಿಗೆ ಹಲ್ಲೆ – ಗಾಯಾಳು ಮಹಿಳೆಯರಿಬ್ಬರು ತೀವ್ರ ನಿಗಾ ಘಟಕದಲ್ಲಿ

0

ಪುತ್ತೂರು : ಮಹಿಳೆಯರಿಬ್ಬರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿ ಪರಾರಿಯಾದ ಘಟನೆ ಬಡಗನ್ನೂರು ಎಂಬಲ್ಲಿ ಆ.22 ರಂದು ನಡೆದ ಬಗ್ಗೆ ವರದಿಯಾಗಿದೆ. ಹಲ್ಲೆಯಿಂದ ಅಸ್ವಸ್ಥಗೊಂಡ ಮಹಿಳೆಯರಿಬ್ಬರನ್ನು ಪುತ್ತೂರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಡಗನ್ನೂರು ನಿವಾಸಿ ಸುಲೇಖ ಮತ್ತು ಅವರ ಮನೆಗೆ ಕೆಲಸಕ್ಜೆ ಬಂದ ಗಿರಿಜಾ ಹಲ್ಲೆಗೊಳಗಾದವರು. ಅವರಿಬ್ಬರು ಗುಡ್ಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸುಲೇಖ ಅವರ ದೂರದ ಸಂಬಂಧಿಯೊಬ್ಬರು ಬಂದು ಸುಲೇಖ ಅವರ ಕುತ್ತಿಗೆ ಬಟ್ಟೆ ಸುತ್ತಿ ಕೊಲೆಗೆ ಯತ್ನಿಸಿದ್ದಾರೆನ್ನಲಾಗಿದೆ. ಇದನ್ನು ನೋಡಿದ ಕೆಲಸಾಕೆ ಗಿರಿಜಾ ಅವರಿಗೂ ಆತ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ಗಾಯಾಳುಗಳಿಬ್ಬರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದು, ಇಬ್ಬರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here