ಕಾಣಿಯೂರು: ಕುದ್ಮಾರು ಬರೆಪ್ಪಾಡಿ ಎಂಬಲ್ಲಿ ತೆರೆಯಲು ಉದ್ದೇಶಿಸಿರುವ ಬಾರ್ ಎಂಡ್ ರೆಸ್ಟೊರೆಂಟ್ಗೆ ಆಕ್ಷೇಪ ವ್ಯಕ್ತಪಡಿಸಿ ಕುದ್ಮಾರು ಸ.ಉ.ಹಿ.ಪ್ರಾ.ಶಾಲಾ ಎಸ್ಡಿಎಂಸಿ
ಮತ್ತು ಕುದ್ಮಾರಿನ ಮಹಿಳಾ ಮಂಡಲದ ವತಿಯಿಂದ ಬೆಳಂದೂರು ಗ್ರಾಮ ಪಂಚಾಯತ್ಗೆ ಮನವಿ ಸಲ್ಲಸಿದ್ದಾರೆ. ಕುದ್ಮಾರು ಸ.ಉ.ಹಿ.ಪ್ರಾ.ಶಾಲಾ ಸಮೀಪದಲ್ಲಿಯೇ ಅಂದಾಜು 200ಮೀ ವ್ಯಾಪ್ತಿಯೊಳಗೆ ಖಾಲಿ ಸ್ಥಳದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಕಟ್ಟಡದ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
ಕಟ್ಟಡದಲ್ಲಿ ಬಾರ್ ಎಂಡ್ ರೆಸ್ಟೊರೆಂಟ್ ತೆರೆಯುವುದಕ್ಕೆ ಉದ್ದೇಶಿಸಿಲಾಗಿದೆ ಎಂಬ ಮಾಹಿತಿಯು ಲಭ್ಯವಾಗಿದ್ದು, ಸದ್ರಿ ಕಟ್ಟಡದಿಂದ ಅನತಿ ದೂರದಲ್ಲಿ ಶಾಲೆಯು ಇದ್ದು, ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ, ಮಾನಸಿಕ ಮತ್ತು ಸಾಮಾಜಿಕ ಭಾವನೆಗಳಿಗೆ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಕಟ್ಟಡದ ಇನ್ನೊಂದು ಬದಿಯಲ್ಲಿ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಸ್ಥಳವು ಇರುತ್ತದೆ. ಅಲ್ಲದೇ ಹಲವಾರು ವಾಸ್ತವ್ಯದ ಮನೆಗಳು, ಅಂಗಡಿ, ಹಾಲಿನ ಸೊಸೈಟಿ, ಗ್ರಾಮಕರಣಿಕರ ಕಚೇರಿ, ಅಂಚೆ ಕಚೇರಿಗಳೂ ಕೂಡ ಇರುತ್ತದೆ. ಆದ್ದರಿಂದ ಬಾರ್ ಎಂಡ್ ರೆಸ್ಟೊರೆಂಟ್ ತೆರೆದಲ್ಲಿ ಶಾಲಾ ಸಂಕೀರ್ಣಕ್ಕೆ ತೊಂದರೆಯಾಗುವ ಸಾಧ್ಯತೆಯಿದ್ದು, ಬಾರ್ ಎಂಡ್ ರೆಸ್ಟೊರೆಂಟ್ ತೆರೆಯುವ ಮೊದಲು ಸೂಕ್ತ ಮಾಹಿತಿ ಸಂಗ್ರಹಿಸಿ, ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಯಾವುದೇ ಅನುಮತಿ ಕೊಡದಂತೆ ಮನವಿಯಲ್ಲಿ ತಿಳಿಸಿದ್ದಾರೆ.