ಚಂದ್ರಯಾನದ ಯಶಸ್ವಿಗೆ ಪುತ್ತೂರು ಬದ್ರಿಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ

0

ಪುತ್ತೂರು: ದೇಶಕ್ಕೆ ದೇಶವೇ ಕಾತರದಿಂದ ಕಾಯುತ್ತಿರುವ ಚಂದ್ರಯಾನ-3 ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಗುರಿ ತಲುಪುವಂತಾಗಲು ಪುತ್ತೂರು ಬದ್ರಿಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಪುತ್ತೂರು ಬದ್ರಿಯಾ ಮಸೀದಿಯ ಖತೀಬರಾದ ಅಬ್ಬಾಸ್ ಪೈಝಿ ಪುತ್ತಿಗೆರವರ ನೇತೃತ್ವದಲ್ಲಿ ಮಸೀದಿಯ ಸಭಾಂಗಣದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಕರವಡ್ತ ವಲಿಯುಲ್ಲಾಹಿ ದರ್ಗಾ ಶರೀಫ್‌ನಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಬಳಿಕ ಮಾತನಾಡಿದ ಅಬ್ಬಾಸ್ ಫೈಝಿ ಪುತ್ತಿಗೆ ಅವರು ಚಂದ್ರಯಾನ-3 ಯೋಜನೆಯ ಭಾಗವಾಗಿರುವ ವಿಕ್ರಂ ಲ್ಯಾಂಡರ್ ಚಂದ್ರಯಾನದ ನೆಲಕ್ಕಿಳಿದು ಇತಿಹಾಸ ಬರೆಯಲು ಸನದ್ಧವಾಗಿದೆ. ಅಲ್ಲಾಹನ ದಯದಿಂದ ಯಶಸ್ವಿಯಾಗಲಿ. ಭಾರತ ದೇಶದ ಕೀರ್ತಿಪತಾಕೆಯನ್ನು ಎಲ್ಲ ಕಡೆ ಪಸರಿಸುವಂತಾಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮಿಟಿಯ ಅಧ್ಯಕ್ಷ ಎಲ್ ಟಿ ಅಬ್ದುಲ್ ರಜಾಕ್ ಹಾಜಿ, ಪ್ರಧಾನ ಕಾರ್ಯದರ್ಶಿ ಹಾಜಿ ಯಾಕೂಬ್ ಖಾನ್ ಬಪ್ಪಳಿಗೆ, ಸದಸ್ಯ ಶೇಕ್ ಜೈನುದ್ದೀನ್, ಪುತ್ತೂರು ಸೀರತ್ ಕಮಿಟಿಯ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಸುರಯ್ಯ, ಯುಪಿ ಅಬ್ಬಾಸ್ ಹಾಜಿ, ಹಮೀದ್ ಕಟ್ಲೇರಿ, ಇಸ್ಮಾಯಿಲ್ ಸಾಹೇಬ್, ಅಬ್ದುಲ್ ರಹಿಮಾನ್ ಅರಮನೆ ಸೇರಿದಂತೆ ನೂರಾರು ಮಂದಿ ಜಮಾತ್ ಸದಸ್ಯರುಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here