ಕಾರು ತಡೆದು ಹಲ್ಲೆ ನಡೆಸಿ, ಹಣ,ಚಿನ್ನ ಕಿತ್ತುಕೊಂಡ ಪ್ರಕರಣ-ಇಬ್ಬರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

0

ಪುತ್ತೂರು:ಕೆಲವು ದಿನಗಳ ಹಿಂದೆ ಉದ್ಯಮಿಯೋರ್ವರಿಗೆ ಹಲ್ಲೆ ನಡೆಸಿ,ಹಣ ಮತ್ತು ಉಂಗುರವನ್ನು ಕಿತ್ತುಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಬ್ಬರಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರುನಲ್ಲಿ ಪಿಆರ್‌ಸಿಕ್ಸ್ ಗ್ರೂಪ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡಿದ್ದು ಊರಿನಲ್ಲಿ ಕೃಷಿಕೆಲಸ ಮಾಡಿಕೊಂಡಿದ್ದ ಪ್ರದೀಪ್ ಪಾಂಬಾರು ಎಂಬವರು ನೀಡಿದ್ದ ದೂರಿನ ಮೇರೆಗೆ ಮನೋಜ್ ಭಂಡಾರಿ ಮತ್ತು ಜೀತನ್ ರೈ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಜು.18ರಂದು ರಾತ್ರಿ ತಾನು ಹಾಗೂ ಸ್ನೇಹಿತ ದೇವರಾಜ್‌ರವರು ಕಾರಿನಲ್ಲಿ, ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಾವನನ್ನು ನೋಡಲು ಬಂದು ಅವರಿಗೆ ಊಟ ಮತ್ತು ನೀರನ್ನು ತರಲು ಆಸ್ಪತ್ರೆ ಸಮೀಪದ ಮೆಟ್ರೋಡೈನ್ ಹೊಟೇಲ್‌ಗೆ ಬಂದು ಕಾರನ್ನು ತಿರುಗಿಸಿ ತೆರಳುತ್ತಿರುವ ಸಮಯ ರಾತ್ರಿ 10.45ರ ಸುಮಾರಿಗೆ ಕಾರಿನ ಹಿಂಬದಿಯಿಂದ ಡಸ್ಟರ್ ಕಾರು ಬಂದಿದ್ದು ಅವರು ಕಾರನ್ನು ಅಡ್ಡವಾಗಿ ನಿಲ್ಲಿಸಿ ಅದರಲ್ಲಿದ್ದ ಇಬ್ಬರು ವ್ಯಕ್ತಿಗಳು ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ಬೈದು ಹೋಗಿದ್ದರು.

ತಾನು ಹಾಗೂ ದೇವರಾಜ್‌ರವರು ಆಸ್ಪತ್ರೆಗೆ ಹೋಗಿ ಮನೆಯ ಕಡೆಗೆ ಹೋಗಲೆಂದು ಕಾರಿನಲ್ಲಿ ಲಿನೆಟ್ ಜಂಕ್ಷನ್ ತಲುಪಿದಾಗ ಅದೇ ಕಾರು ಪೆಟ್ರೋಲ್ ಪಂಪ್‌ನಿಂದ ಏಕಾಏಕಿಯಾಗಿ ರಸ್ತೆಗೆ ಬಂದು ನಮ್ಮ ಕಾರಿಗೆ ಅಡ್ಡ ನಿಲ್ಲಿಸಿದ್ದರು.ತಾನು ಕಾರಿನಿಂದ ಇಳಿದ ಸಂದರ್ಭ ಡಸ್ಟರ್ ಕಾರಲ್ಲಿದ್ದ ಇಬ್ಬರು ನನ್ನ ಕಾರಿನ ಡೋರ್ ಎಳೆದು ನನಗೆ ಹಲ್ಲೆ ನಡೆಸಿ ಪ್ಯಾಂಟಿನ ಕಿಸೆಯಲ್ಲಿದ್ದ ಪರ್ಸ್ ತೆಗೆದು ಅದರಲ್ಲಿದ್ದ ಸುಮಾರು 9 ಸಾವಿರ ರೂ.ನಗದು ಮತ್ತು ಬಲಕೈ ಬೆರಳಲ್ಲಿದ್ದ 5 ಗ್ರಾಂ ತೂಕದ ಚಿನ್ನದ ಉಂಗುರವನ್ನು ಕಿತ್ತುಕೊಂಡು ಹೋಗಿದ್ದರು ಎಂದು ಆರೋಪಿಸಿ ಪ್ರದೀಪ್ ಪಾಂಬಾರು ಅವರು ದೂರು ನೀಡಿದ್ದರು.ಈ ಪ್ರಕರಣದ ಆರೋಪಿಗಳಾಗಿರುವ ಮನೋಜ್ ಭಂಡಾರಿ ಮತ್ತು ಜೀತನ್ ರೈಯವರಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರ ಖ್ಯಾತ ವಕೀಲ ಮಹೇಶ್ ಕಜೆ ವಾದಿಸಿದ್ದರು.

LEAVE A REPLY

Please enter your comment!
Please enter your name here