ಶಟಲ್ ಬ್ಯಾಂಡ್ಮಿಟನ್ ಪಂದ್ಯಾಟ – ಸುದಾನ ಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆ

0

ಪುತ್ತೂರು: ನಗರ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕಿಯರ ಶಟಲ್ ಬ್ಯಾಂಡ್ಮಿಟನ್ ಪಂದ್ಯಾಟವು ಆಗಸ್ಟ್ 19 ರಂದು ಪುತ್ತೂರಿನ ಸೈಂಟ್ ವಿಕ್ಟರ್‍ಸ್ ಶಾಲೆಯಲ್ಲಿ ನಡೆಯಿತು.

ಇದರಲ್ಲಿ ಪುತ್ತೂರಿನ ಸುದಾನ ವಸತಿ ಶಾಲೆಯ ಪ್ರಾಥಮಿಕ ಶಾಲಾ ಬಾಲಕಿಯರ ತಂಡವು ಪ್ರಥಮ ಸ್ಥಾನವನ್ನು ಪಡೆದಿದ್ದು ಈ ತಂಡದಲ್ಲಿ ಮೋನಿಕಾ ಬಿ.ವಿ (7ನೇ), ಫಾತಿಮ ಹನಾ (7ನೇ), ಹಾಗೂ ಮಾನ್ವಿ ಡಿ (7ನೇ) ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರಿಗೆ ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ಮತ್ತು ಮುಖ್ಯಶಿಕ್ಷಕಿ ಶೋಭಾ ನಾಗರಾಜ್ ರವರು ಶುಭ ಹಾರೈಸಿದ್ದಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕರು ಮಾರ್ಗದರ್ಶನವನ್ನು ಮಾಡಿದ್ದರು.

LEAVE A REPLY

Please enter your comment!
Please enter your name here