ಉಪ್ಪಿನಂಗಡಿ ಇಂಡಿಯನ್ ಸ್ಕೂಲ್‌ನಲ್ಲಿ ಮೀಫ್ ಮೊಂಟೆಸ್ಸರಿ ಶಿಕ್ಷಕರ ಕಾರ್ಯಾಗಾರ ಉದ್ಘಾಟನೆ

0

ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸಂಸ್ಕಾರ, ಪೋಷಕರ ಕಣ್ಗಾವಲು ಅತ್ಯವಶ್ಯ -ಬಿ.ಎಸ್. ರವಿ

ಪುತ್ತೂರು: ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣಗಳ ಒಕ್ಕೂಟ (ಮೀಫ್) ಇದರ ಆಶ್ರಯದಲ್ಲಿ ಎಲ್‌ಕೆಜಿ, ಯು ಕೆಜಿ ಫ್ರೀಕೆಜಿ ಶಿಕ್ಷಕರುಗಳಿಗೆ ಏಕದಿನ ಮೊಂಟೆಸ್ಸರಿ ತರಬೇತಿ ಶಿಬಿರ ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ಆಡಿಟೋರಿಯಂ ನಲ್ಲಿ ನಡೆಯಿತು. ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಬಿ.ಎಸ್. ರವಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮುಸ್ಲಿಂ ಸಮುದಾಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ತನ್ನ ಅಪಾರ ಕೊಡುಗೆಯನ್ನು ನೀಡಿದೆ, ದೇಶದ ಮುಖ್ಯ ವಾಹಿನಿಯಲ್ಲಿ ಸಾಮರಸ್ಯ, ಭಾವಕ್ಯತೆಯ ಬದುಕಿನೊಂದಿಗೆ ಅಪರಾಧ ಮುಕ್ತ ಸಮಾಜ ನಿರ್ಮಾಣವಾಗಬೇಕು ಎಂದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ವಹಿಸಿದ್ದರು ಉಪಾಧ್ಯಕ್ಷ ಕೆ. ಎಂ. ಮುಸ್ತಫ ವಿಷಯ ಮಂಡನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ಅಧ್ಯಕ್ಷ ಯೂಸುಫ್ ಹಾಜಿ, ಸಂಚಾಲಕ ಶುಕೂರ್ ಹಾಜಿ, ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಜ್ ಟ್ಯಾಲೆಂಟ್, ಯೋಜನಾ ನಿರ್ದೇಶಕ ಶಾರಿಕ್, ಕಾರ್ಯಕ್ರಮ ಸಂಯೋಜಕರುಗಳಾದ ಶೇಖ್ ರಹ್ನತುಲ್ಲಾ ಬುರೂಜಿ, ಮನ್ ಶರ್ ವಿದ್ಯಾಲಯದ ಪ್ರಾಂಶುಪಾಲ ಹೈದರ್ ಮರ್ಧಾಳ, ಇಂಡಿಯನ್ ಸ್ಕೂಲ್ ಮುಖ್ಯೊಪಾಧ್ಯಾಯಿನಿ ಸಂಶಾದ್ ಬೇಗಂ ಮೊದಲಾದವರು ಉಪಸ್ಥಿತರಿದ್ದರು.
ತರಬೇತಿ ಸಂಸ್ಥೆಯ ಮುಖ್ಯಸ್ಥರಾದ ಫಾತಿಮ ಶಮೀನ, ದೀಪಾ, ಸ್ಮಿತಾ ಮೊದಲಾದವರ ತಂಡ ಪ್ರಾತ್ಯಕ್ಷಿಕೆಯೊಂದಿಗೆ, ಆಧುನಿಕ ಕಲಿಕಾ ವಿಧಾನ, ಮಕ್ಕಳ ವ್ಯಕ್ತಿತ್ವ ವಿಕಸನ, ಮಾನಸಿಕ ದೈಹಿಕ ಆರೋಗ್ಯ, ಪಠ್ಯ, ಇತರ ವಿಷಯಗಳ ಬಗ್ಗೆ ಪರಿಣಾಮಕಾರಿ ತರಬೇತಿ ನೀಡಿದರು. ಮೀಫ್ ಪೂರ್ವ ವಿಭಾಗದ ಸುಳ್ಯ, ಕಡಬ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳ 160 ಕ್ಕೂ ಮಿಕ್ಕಿದ ಶಿಕ್ಷಕರು ಶಿಬಿರದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here