ಪುತ್ತೂರು:ಗ್ರಾಮೀಣ ಪ್ರದೇಶದಲ್ಲಿ ಅಡಕವಾಗಿರುವ ಬಹಳಷ್ಟು ಪ್ರತಿಭೆಗಳು ಟಿ.ವಿ. ನೋಡುತ್ತಾ ನಾನೂ ಹೀಗೆ ಹಾಡಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಆದರೆ ಅವರಿಗೆ ಪ್ರೋತ್ಸಾಹ, ಮಾರ್ಗದರ್ಶನದ ಕೊರತೆ ಇರುತ್ತದೆ. ಅಂಥವರಿಗೆ ಮುಳಿಯ ಸಂಸ್ಥೆ ವೇದಿಕೆಯಾಗುವ ಮೂಲಕ ಮುಳಿಯ ಗಾನರಥ -ಕರೋಕೆ ಹಾಡುಗಳ ಗಾಯನ ಸ್ಪರ್ಧೆ ವಿವಿಧ ಕಡೆ ನಡೆದು ಅದರ ಗ್ರ್ಯಾಂಡ್ ಫಿನಾಲೆ ಆ.26ರಂದು ಪುತ್ತೂರು ಜೈನಭವನದಲ್ಲಿ ನಡೆಯಿತು. ಮುಳಿಯ ಜ್ಯುವೆಲ್ಸ್ನ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಮತ್ತು ಇನ್ನರ್ ವೀಲ್ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಅವರು ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕ್ಷಿತಿ ಕೆ ರೈ ಭಾಗವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಆನಂದ ಕುಲಾಲ್, ರಮೇಶ್ ಕುಲಾಲ್, ತೀರ್ಪುಗಾರರಾದ ಗಣೇಶ್ ಮಂಗಳೂರು, ಮಿಥುನ್ರಾಜ್ ಕಬಕ, ವಿದ್ಯಾಶ್ರೀ ಕಲ್ಲಡ್ಕ, ಉದಯ ಕುಮಾರ್ ಲಾಲ ಮತ್ತು ಮುಳಿಯ ಜ್ಯುವೆಲ್ಸ್ನ ಶಾಖಾ ಪ್ರಬಂಧಕ ನಾಮದೇವ್ ಮಲ್ಯ, ಸ್ಟೋರ್ ಮ್ಯಾನೇಜರ್ ಪ್ರವೀಣ್, ಸಂಜೀವ ಉಪಸ್ಥಿತರಿದ್ದರು. ಕಾರ್ಯಕ್ರಮ ಸುದ್ದಿ ನ್ಯೂಸ್ ಪುತ್ತೂರು ಯುಟ್ಯೂಬ್ ಚಾನೆಲ್ನಲ್ಲಿ ನೇರ ಪ್ರಸಾರಗೊಂಡಿತ್ತು.