ಸುನ್ನೀ ಜಂಯ್ಯತ್ತುಲ್ ಉಲಮಾ ಪುತ್ತೂರು ಝೋನ್ ವಾರ್ಷಿಕ ಕೌನ್ಸಿಲ್ – ಫತ್ಹುಲ್ ಮುಈನ್ ತರಗತಿಗೆ ಚಾಲನೆ

0

ಪುತ್ತೂರು: ಪುತ್ತೂರು ಸುನ್ನೀ ಜಂಇಯ್ಯತುಲ್ ಉಲಮಾ ಪುತ್ತೂರು ಝೋನ್ ಇದರ ವಾರ್ಷಿಕ ಕೌನ್ಸಿಲ್ ಝೋನ್ ಅಧ್ಯಕ್ಷ ಇಬ್ರಾಹಿಂ ಸಅದಿ ಮಾಣಿ ಉಸ್ತಾದರ ಅಧ್ಯಕ್ಷತೆಯಲ್ಲಿ ದಾರುಲ್ ಇರ್ಷಾದ್ ಕೆಜಿಎನ್ ಕ್ಯಾಂಪಸ್‌ನಲ್ಲಿ ನಡೆಯಿತು.

ಹಿರಿಯ ವಿದ್ವಾಂಸರಾದ ಅಬುಲ್ ಬುಶ್ರಾ ಸಂಪ್ಯ ಉಸ್ತಾದ್ ಸಭೆ ಉದ್ಘಾಟಿಸಿದರು. ಕರ್ನಾಟಕ ಉಲಮಾ ಒಕ್ಕೂಟದ ಅಧ್ಯಕ್ಷರಾದ ಝೈನುಲ್ ಉಲಮಾ ಮಾಣಿ ಉಸ್ತಾದ್ ಫತ್ಹುಲ್ ಮುಈನ್ ತರಗತಿ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದರು. ಎಸ್ ಪಿ ಹಂಝ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು. ಮುಹಮ್ಮದ್ ಖಾಸಿಮಿ ಅಳಕೆಮಜಲು ಶುಭಹಾರೈಸಿ ಮಾತನಾಡಿದರು. ಸಯ್ಯದ್ ಸ್ವಲಾಹುದ್ದೀನ್ ಅದನಿ ಪೆರುಮುಗಮ್, ಅಬುಲ್ ಬುಶ್ರಾ ಸಂಪ್ಯ ಉಸ್ತಾದ್, ಹಂಝ ಮುಸ್ಲಿಯಾರ್ ಈಶ್ವರಮಂಗಲ, ಸತ್ತಾರ್ ಸಖಾಫಿ, ಅಬ್ದುಲ್ ಅಝೀಝ್ ಮಿಸ್ಬಾಹಿ, ಶರೀಫ್ ಸಖಾಫಿ ಮಾಣಿ, ಶರೀಫ್ ಸಖಾಫಿ ಅಳಕೆಮಜಲು, ಯಾಕೂಬ್ ಸಅದಿ ಇರ್ದೆ, ಯೂನುಸ್ ಸಅದಿ ಉಪಸ್ಥಿತರಿದ್ದರು. ಝೊನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು. ಅಬೂಶಝ ವಂದಿಸಿದರು.

LEAVE A REPLY

Please enter your comment!
Please enter your name here