ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಚೆಸ್ ಸ್ಪರ್ಧೆಯಲ್ಲಿ ಝೋನಲ್ ಲೆವೆಲ್ ಸ್ಪರ್ಧೆಗೆ ಆಯ್ಕೆ

0

ಪುತ್ತೂರು: ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಇದೇ ಆ.12ರಂದು ನಡೆದ ವಿದ್ಯಾ ಭಾರತಿ ರಾಜ್ಯಮಟ್ಟದ ಚೆಸ್ ಪಂದ್ಯಾಟದಲ್ಲಿ, ಬಾಲವರ್ಗದ ಬಾಲಕರ ವಿಭಾಗದಲ್ಲಿ ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳಾದ ಕಶ್ಯಪ್ ಆಳ್ವಾ, ಕಿಶೋರವರ್ಗದ ಬಾಲಕರ ವಿಭಾಗದಲ್ಲಿ ಆಯುಷ್ ನರೇಂದ್ರ ಪಿ ಹಾಗೂ ಶಶಾಂಕ್ ವಿಜೇತರಾಗಿದ್ದಾರೆ. ಇವರು ಸೆಪ್ಟೆಂಬರ್ 2ರಂದು ಹೈದರಾಬಾದ್ ನಲ್ಲಿ ನಡೆಯಲಿರುವ ಝೋನಲ್ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಮಾತ್ರವಲ್ಲದೆ ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ಕೃತಿ ರೈ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here