ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಸರ್ಕಲ್‌ನಿಂದ ದ್ವೇಷ ಬಿಟ್ಟು ದೇಶ ಕಟ್ಟು’ ಪ್ರಜಾಭಾರತ ಸಂಗಮ ಕಾರ್ಯಕ್ರಮ

0

ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ (ಕೆಎಂಜೆ) ಪುತ್ತೂರು ಸರ್ಕಲ್ ವತಿಯಿಂದ ಸರ್ಕಲ್ ಅಧ್ಯಕ್ಷ ಯೂಸುಫ್ ಗೌಸಿಯ ಸಾಜ ಅಧ್ಯಕ್ಷತೆಯಲ್ಲಿ ದ್ವೇಷ ಬಿಟ್ಟು ದೇಶ ಕಟ್ಟು’ ಎಂಬ ಶಿರ್ಷಿಕೆಯಡಿಯಲ್ಲಿ ಪ್ರಜಾಭಾರತ ಸಂಗಮ’ ಪುತ್ತೂರು ಸುನ್ನೀ ಸೆಂಟರ್‌ನಲ್ಲಿ ನಡೆಯಿತು. ಸಭೆ ಉದ್ಘಾಟಿಸಿದ ಎಸ್‌ವೈಎಸ್ ಜಿಲ್ಲಾ ನಾಯಕ ಸಿರಾಜುದ್ದೀನ್ ಸಖಾಫಿ ಮಾತನಾಡಿ ಜಾತಿಧರ್ಮದೆಡೆಯಲ್ಲಿರುವ ದ್ವೇಷ ವೈಷಮ್ಯ ಮಾಯವಾಗಿ ಸುಂದರ ವಾತವರಣದ ಕರ್ನಾಟಕವನ್ನು ಕಟ್ಟಲು ನಾವು ಮುಂದಾಗಬೇಕೆಂದು, ಕೋಮುವಾದವನ್ನು ತೊಡೆದುನೀಗಿಸುವಲ್ಲಿ ಎಲ್ಲರೂ ಪರಸ್ಪರ ಕೈಜೋಡಿಸಬೇಕೆಂದು ಹೇಳಿದರು.


ಹಾರಾಡಿ ಪ್ರಾಥಮಿಕ ಶಾಲೆ ಮುಖೋಪಾಧ್ಯಾಯರಾದ ಕುಕ್ಕ ಮಾಸ್ಟರ್ ಮಾತನಾಡಿ ಮಕ್ಕಳು ಕೆಟ್ಟ ಚಟುವಟಿಕೆಗಳಿಗೆ ಬಲಿಯಾಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕೆಂದು ಹೇಳಿದರು.


ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ದೈ.ಶಿ.ಶಿಕ್ಷಕ ದಯಾನಂದ ರೈ ಕೋರ್ಮಂಡ ಮಾತನಾಡಿ ಸೌಹಾರ್ಧ ಭಾರತವನ್ನು ಕಟ್ಟಲು ನಾವೆಲ್ಲಾ ಶ್ರಮಿಸಬೇಕೆಂದು ಹೇಳಿದರು.
ಕೆ ಕೃಷ್ಣಪ್ಪರವರು ಮಾತನಾಡಿ ಬಾಲ್ಯ ಕಾಲದ ಹಿಂದು ಮುಸ್ಲಿಮ್ ಎಂಬ ಭೇದಭಾವ ಇಲ್ಲದೆ ಸವೆಸಿದ ಬದುಕನ್ನು ಮೆಲುಕು ಹಾಕುತ್ತಾ ಭಾರತ ದೇಶದ ಮಣ್ಣು ಯಾವತ್ತೂ ಸೌಹಾರ್ದ ಮಣ್ಣಾಗಿದ್ದು ಅದರೆಡಯಲ್ಲಿ ಬರುವ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ನಾವು ಸಾಗಬೇಕು ಎಂದು ಹೇಳಿದರು.


ಆದಂ ಹಾಜಿ ಪಡೀಲ್, ಇಸ್ಮಾಯಿಲ್ ಹಾಜಿ ಬನ್ನೂರು, ಇಕ್ಬಾಲ್ ಬಪ್ಪಳಿಗೆ, ಇಸ್ಮಾಯಿಲ್ ಹಾಜಿ ಕೊಂಬಾಳಿ, ಅಬೂಬಕ್ಕರ್ ಪಾಪ್ಲಿ, ನರಿಮೊಗರು ಮುಹಮ್ಮದ್ ಹಾಜಿ ಪಾಪೆತ್ತಡ್ಕ ಮುಂತಾದವರು ಉಪಸ್ಥಿತರಿದ್ದರು.

ಸೌಹಾರ್ದ ದೇಶ ಕಟ್ಟುವ ಉದ್ದೇಶ-ಯೂಸುಫ್ ಗೌಸಿಯಾ
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಆದೇಶದ ಪ್ರಕಾರ ಕರ್ನಾಟಕ ಮುಸ್ಲಿಂ ಜಮಾಅತ್‌ನ ಪ್ರತೀ ಸರ್ಕಲ್ ವತಿಯಿಂದ ದ್ವೇಷ ಬಿಟ್ಟು ದೇಶ ಕಟ್ಟು’ ಪ್ರಜಾಭಾರತ ಸಂಗಮ ಕಾರ್ಯಕ್ರಮ ಆಯೋಜನೆಯಾಗುತ್ತಿದ್ದು ಎಲ್ಲಾ ಜಾತಿ, ಧರ್ಮದವರನ್ನು ಒಂದೇ ವೇದಿಕೆಗೆ ತಂದು ಸೌಹರ್ದದ ದೇಶ ಕಟ್ಟುವುದು ಇದರ ಉದ್ದೇಶವಾಗಿದೆ. ಅದರಂತೆ ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಸರ್ಕಲ್‌ನಿಂದ ಯಶಸ್ವಿಯಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಸರ್ಕಲ್ ಅಧ್ಯಕ್ಷ ಯೂಸುಫ್ ಗೌಸಿಯ ಸಾಜ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here