ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘದ 22ನೇ ವಾರ್ಷಿಕ ಮಹಾಸಭೆ

0

ರೂ 5.15 ಕೋಟಿ ನಿವ್ವಳ ಲಾಭ. ಶೇ 12ಡಿವಿಡೆಂಡ್‌ ಘೋಷಣೆ

ಸುಸಜ್ಜಿತ ಪ್ರಧಾನ ಕಚೇರಿ ಕಟ್ಟಡದ ಕಾಮಗಾರಿ ಶೀಘ್ರವೇ ಆರಂಭ– ಅಧ್ಯಕ್ಷ ಎಸ್‌ ಆರ್‌ ಸತೀಶ್ಚಂದ್ರ

ಪುತ್ತೂರು : ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ ರಾಜ್ಯದಾದ್ಯಂತ 18 ಶಾಖೆಗಳೊಂದಿಗೆ ಕಾರ್ಯಾಚರಿಸುತ್ತಿರುವ ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘದ 22ನೇ ವಾರ್ಷಿಕ ಮಹಾಸಭೆಯು ಸಹಕಾರಿಯ ಅಧ್ಯಕ್ಷ ಎಸ್‌ ಆರ್‌ ಸತೀಶ್ಚಂದ್ರ ಅಧ್ಯಕ್ಷತೆಯಲ್ಲಿ ಆ.27ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.

ಸಹಕಾರಿಯ ಅಧ್ಯಕ್ಷ ಮಾತನಾಡಿ ಸಹಕಾರಿಯೂ ಗಣನೀಯ ಪ್ರಗತಿ ಸಾಧಿಸಲು ಕಾರಣೀಕರ್ತರಾದ ಎಲ್ಲಾ ಸದಸ್ಯ ಬಾಂಧವರಿಗೆ ಅಭಿನಂದನೆ ಸಲ್ಲಿಸಿದರು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೊಸ ಶಾಖೆಗಳನ್ನು ತೆರೆಯುವುದು ಹಾಗೂ ಸಹಕಾರಿಯ ಸ್ವಂತ ಕಟ್ಟಡದ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು. 2022 -23ರ ಆರ್ಥಿಕ ವರ್ಷಾಂತ್ಯಕ್ಕೆ ಸಹಕಾರಿಯಲ್ಲಿ 40,075 ಸದಸ್ಯರು ರೂ 9.81ಕೋಟಿ ಪಾಲು ಬಂಡವಾಳವನ್ನು ಹೂಡಿರುತ್ತಾರೆ. ಸಹಕಾರಿಯು ರೂ 26.34 ಕೋಟಿ ವಿವಿಧ ನಿಧಿಗಳನ್ನು ಹೊಂದಿ ಸದೃಢವಾಗಿದೆ.ಎಂದರು. ಸಹಕಾರಿಯು ತನ್ನ ಸದಸ್ಯರಿಂದ ರೂ 256.56ಕೋಟಿ ಠೇವಣಾತಿಯನ್ನು ಸಂಗ್ರಹಿಸಿ ರೂ 227.97 ಕೋಟಿ ಸಾಲವನ್ನು ವಿತರಿಸಿ, ರೂ. 5.15 ಕೋಟಿ ನಿವ್ವಳ ಲಾಭ ದಾಖಲಿಸಿದ್ದು ಸದಸ್ಯರಿಗೆ ಶೇ 12 ಡಿವಿಡೆಂಡ್ ನ್ನು ಸಭೆಯಲ್ಲಿ ಘೋಷಿಸಲಾಯಿತು.

ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ವಸಂತ ನಾಯಕ್‌ ಎ ರವರು ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳನ್ನು ಮಂಡಿಸಿದರು. ಸಹಕಾರಿಯ ಸದಸ್ಯರುಗಳು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.


ವೇದಿಕೆಯಲ್ಲಿ ಸಹಕಾರಿಯ ಉಪಾಧ್ಯಕ್ಷ ಉಮೇಶ್‌ ಪ್ರಭು, ನಿರ್ದೇಶಕ ದೇವಿಪ್ರಸಾದ್‌ ಕೆ, ಕೆ ಹರೀಶ್‌ ಬೋರ್ಕರ್‌, ಹೇಮಂತ ಕುಮಾರ್‌ ಕೆ ಆರ್‌, ಪ್ರಕಾಶ್ಚಂದ್ರ ಪಿ, ರಮೇಶ್ಚಂದ್ರ ಎಂ, ರಾಜಗೋಪಾಲ ಬಿ, ದೇವಕಿ ಕೆ, ಸರಸ್ವತಿ ಎನ್‌ , ವೃತ್ತಿಪರ ನಿರ್ದೇಶಕ, ಬಿ ವಸಂತ ಶಂಕರ್‌, ವೇದವ್ಯಾಸ ಕೆ, ಕಾರ್ಯಾನುಗುಣ ನಿರ್ದೇಶಕ ಶ್ರೀಕಾಂತ ರಾವ್‌ ವಿ ಡಿ , ರವೀಶ ಪಿ ಹಾಗೂ ವರದಿ ವರ್ಷದ ಸನದು ಲೆಕ್ಕ ಪರಿಶೋಧಕರಾದ ಸಿ.ಎ ಸುಜಯ ಡಿ ಆಳ್ವರವರು ಉಪಸ್ಥಿತರಿದ್ದರು.


ಸಹಕಾರಿಯ ಕಿರಿಯ ಅಧಿಕಾರಿ ಸುಷ್ಮಾ ಎ ಪ್ರಾರ್ಥಿಸಿದರು, ದರ್ಬೆ ಶಾಖೆಯ ವ್ಯವಸ್ಥಾಪಕ ಪ್ರದೀಪ್‌ ಕುಮಾರ್‌ ಎನ್‌ ಸ್ವಾಗತಿಸಿ , ಎಂ ಎಸ್‌ ರಸ್ತೆ ಪುತ್ತೂರು ಶಾಖೆಯ ವ್ಯವಸ್ಥಾಪಕ ದೇವಿಪ್ರಸಾದ್‌ ವಂದಿಸಿದರು. ಪ್ರಧಾನ ಕಚೇರಿಯ ವ್ಯವಸ್ಥಾಪಕ ಶಿವಪ್ರಸಾದ್‌ ಟಿ ಇವರು ನಿರೂಪಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮ :
ಮಹಾಸಭೆಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಹಕಾರಿಯ ಸಿಬ್ಬಂದಿಗಳಿಂದ “ಸ್ವರ ಮಾಧುರ್ಯ” ಸಂಗೀತ ರಸಮಂಜರಿ ಹಾಗೂ ಅಪರಾಹ್ನ ವಿಠಲ ನಾಯಕ್‌ ಕಲ್ಲಡ್ಕ ಮತ್ತು ಬಳಗದವರಿಂದ “ಗೀತಾ ಸಾಹಿತ್ಯ ಸಂಭ್ರಮ” ವಿನೂತನ ಶೈಲಿಯ ಕಾರ್ಯಕ್ರಮವು ನಡೆಯಿತು.

LEAVE A REPLY

Please enter your comment!
Please enter your name here