ವಿಕಲಚೇತನರ ಮನೆ ಬಾಗಿಲಿಗೆ ಯು.ಡಿ ಐಡಿ ಕಾರ್ಡ್ ಅಭಿಯಾನಕ್ಕೆ ಚಾಲನೆ

0

ಪುತ್ತೂರು: ವಿಕಲಚೇತನರ ಮನೆ ಬಾಗಿಲಿಗೆ udid card(ಯು.ಡಿ ಐಡಿ) ಕಾರ್ಡ್ ಅಭಿಯಾನಕ್ಕೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಾಲನೆ ನಡೆಯಿತು. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಪುತ್ತೂರು ತಾಲೂಕು ಸರಕಾರಿ ಆಸ್ಪತ್ರೆಯ ಆಡಳಿತ ವ್ಯೆದ್ಯಾಧಿಕಾರಿ ಡಾ. ಆಶಾಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಸರಕಾರಿ ಹಾಸ್ಪಿಟಲ್‌ನ ದಂತವ್ಯೆಧಾಧಿಕಾರಿ ಡಾ. ಜಯದೀಪ್, ಫಿಸಿಷಿಯನ್ ಹಿರಿಯ ವ್ಯೆಧಾಧಿಕಾರಿ ಡಾ.ಯುದ್ಧರಾಜ್, ಪುತ್ತೂರು ತಾಲೂಕು ಪಂಚಾಯತ್ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರಾದ ನವೀನ್ ಕುಮಾರ್, ಕಡಬ ವಿಕಲಚೇತನರ ಪುನರ್ವಸತಿ ಕಾರ್ಯಕರ್ತೆ ಅಕ್ಷತಾ ಎ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಕಲಚೇತನರು ಹಾಗೂ ಪುತ್ತೂರು /ಕಡಬ ತಾಲೂಕಿನ ಗ್ರಾಮೀಣ/ನಗರ ಪುನರ್ವಸತಿ ಕಾರ್ಯಕರ್ತರು ಭಾಗವಹಿಸಿದರು.

LEAVE A REPLY

Please enter your comment!
Please enter your name here