ನೆಲ್ಯಾಡಿ ಬೆಥನಿ ಐಟಿಐ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

0

ಸ್ವಾವಲಂಭಿ ಜೀವನಕ್ಕೆ ತಾಂತ್ರಿಕ ಶಿಕ್ಷಣ ಪೂರಕ: ಸಲಿನ್ ಕೆ.ಪಿ

ನೆಲ್ಯಾಡಿ: ಬೆಥನಿ ಐಟಿಐ ನೆಲ್ಯಾಡಿ ಇಲ್ಲಿನ 2023-24ನೇ ಸಾಲಿನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಕಡಬ ಸರಕಾರಿ ಪಿ.ಯು.ಕಾಲೇಜಿನ ಉಪನ್ಯಾಸಕ ಸೆಲಿನ್ ಕೆ.ಪಿ.ಮಾತನಾಡಿ, ವರ್ತಮಾನ ಶಿಕ್ಷಣದಲ್ಲಿ ತಾಂತ್ರಿಕ ಶಿಕ್ಷಣವು ಒಬ್ಬ ವ್ಯಕ್ತಿಯನ್ನು ಸ್ವಾವಲಂಭಿಯಾಗಿ ಹಾಗೂ ಸ್ವ ಉದ್ಯೋಗಿಯಾಗಿ ರೂಪಿಸಲು ಪೂರಕವಾಗಿದೆ. ವಿದ್ಯಾಭ್ಯಾಸದ ಬಳಿಕ ವಿದ್ಯಾರ್ಥಿಗಳು ಸಂಸ್ಥೆಯ ರಾಯಭಾರಿಗಳಾಗಬೇಕು. ಅದೇ ರೀತಿ ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ತೋಮಸ್ ಬಿಜಿಲಿ ಒಐಸಿ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಸಜಿ ಕೆ ಥೋಮಸ್, ತರಬೇತಿ ಅಧಿಕಾರಿ ಜೋನ್ ಪಿ.ಎಸ್, ಕಿರಿಯ ತರಬೇತಿ ಅಧಿಕಾರಿ ವರ್ಗೀಸ್ ಎನ್. ಟಿ. ಉಪಸ್ಥಿತರಿದ್ದರು. ತರಬೇತಿ ಅಧಿಕಾರಿ ಜೋನ್ ಪಿ.ಎಸ್. ಸ್ವಾಗತಿಸಿ, ಕಿರಿಯ ತರಬೇತಿ ಅಧಿಕಾರಿ ಸಂತೋಷ್ ಪಿಂಟೋ ವಂದಿಸಿದರು. ಕಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸವಿ ನೆನಪಿಗಾಗಿ ಸಂಸ್ಥೆಯ ಆವರಣದಲ್ಲಿ ಕಲ್ಪವೃಕ್ಷವನ್ನು ನೆಡಲಾಯಿತು.

LEAVE A REPLY

Please enter your comment!
Please enter your name here