ಪುತ್ತೂರು: ದಕ್ಷಿಣ ಕನ್ನಡ ಅಮೆಚೂರ್ ಸ್ಪೋರ್ಟ್ ಕರಾಟೆ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಆಗಸ್ಟ್ 26,27ರಂದು ಮಂಗಳೂರಿನಲ್ಲಿ ನಡೆದ ‘ದಕ್ಷಿಣ ಕನ್ನಡ ಸೆಲೆಕ್ಷನ್ ಕರಾಟೆ ಚಾಂಪಿಯನ್ ಶಿಪ್ – 2023’ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಇಶಿಕಾ ಕೆ (ಬ್ಲೇಕ್ ಬೆಲ್ಟ್) ಮಹಿಳೆಯರ ಜೂನಿಯರ್ 16-18 ವರ್ಷ ವಿಭಾಗದ ವೈಯಕ್ತಿಕ ಕಟ ವಿಭಾಗದಲ್ಲಿ ತೃತೀಯ ಹಾಗೂ ಮಹಿಳೆಯರ ಜೂನಿಯರ್ 53 – 59ಕೆಜಿ ವೈಯಕ್ತಿಕ ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ .
ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಪುತ್ತೂರಿನ ಸಂಜಯನಗರ ಶಾಲೆಯ ಶಿಕ್ಷಕಿ ಸ್ಮಿತಾ ಶ್ರೀ.ಬಿ ಹಾಗೂ ಇಂಜಿನಿಯರ್ ದಿನೇಶ್ ನಾಯ್ಕ್ ಅವರ ಹಿರಿಯ ಪುತ್ರಿ. ಇವರಿಗೆ ಸೆನ್ಸಾಯಿ ಟಿಡಿ ಥೋಮಸ್ ರವರು ತರಬೇತಿಯನ್ನು ನೀಡಿರುತ್ತಾರೆ . ಕಾಲೇಜಿನ ಪ್ರಾಂಶುಪಾಲರು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.