ಕಾಣಿಯೂರು: ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಆಶ್ರಯದಲ್ಲಿ ಸೆ 6ರಂದು ಕಾಣಿಯೂರು ಸ.ಹಿ.ಪ್ರಾ.ಶಾಲಾ ವಠಾರದಲ್ಲಿ ನಡೆಯಲಿರುವ ಶ್ರೀ ಕೃಷ್ಣಾಜನ್ಮಾಷ್ಟಮಿ ಪ್ರಯುಕ್ತ 11ನೇ ವರ್ಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣವನ್ನು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ ಕಲ್ಪಡ, ಅಧ್ಯಕ್ಷ ವಾಸುದೇವ ನಾಯ್ಕ್ ತೋಟ, ಕಾರ್ಯದರ್ಶಿ ಜಯಂತ ಅಬೀರ, ಕೋಶಾಧಿಕಾರಿ ಲಕ್ಷ್ಮಣ ಗೌಡ ಮುಗರಂಜ, ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಮೀಜೆ, ಕಾರ್ಯದರ್ಶಿ ದೀಕ್ಷಿತ್ ಕಂಪ, ಗೌರವಾಧ್ಯಕ್ಷ ಸುರೇಶ್ ಓಡಬಾಯಿ, ಕೋಶಾಧಿಕಾರಿ ವಸಂತ ಪೆರ್ಲೋಡಿ, ಸದಸ್ಯರಾದ ಪುಟ್ಟಣ್ಣ ಗೌಡ ಮುಗರಂಜ, ಪರಮೇಶ್ವರ ಅನಿಲ, ವಿಶ್ವನಾಥ ಓಡಬಾಯಿ ಮತ್ತಿತರರು ಉಪಸ್ಥಿತರಿದ್ದರು.
©