ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ರಕ್ಷಾ ಬಂಧನ ಆಚರಣೆ

0

 ಪವಿತ್ರವಾದ ರಕ್ಷಾ ಬಂಧನ ವಿಶ್ವಭಾತೃತ್ವಕ್ಕೆ ಮುನ್ನುಡಿ ಬರೆಯಲಿ-  ರಮೇಶ್ 

ಬೆಟ್ಟಂಪಾಡಿ: ಇಲ್ಲಿನ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ರಕ್ಷಾ ಬಂಧನ ಆಚರಣೆ ಕಾರ್ಯಕ್ರಮ ಆ. 30 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬ್ಯಾಂಕ್ ಆಫ್ ಬರೋಡ ಬೆಟ್ಟಂಪಾಡಿ ಶಾಖೆಯ ಸಿಬಂದಿ ರಮೇಶ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ‘ಮಮತೆ ಪ್ರೀತಿ ಸಂಪ್ರದಾಯಗಳ ರಕ್ಷಣೆಯ ಈ ರಕ್ಷಾ ಬಂಧನ ವಿಶ್ವಭ್ರಾತೃತ್ವಕ್ಕೆ ಮುನ್ನುಡಿ ಬರೆಯಲಿ. ಇದು ಭಾವನೆಗಳಿಗೆ ಸಂಬಂಧಿಸಿದ ಹಬ್ಬ. ಸಹೋದರ ಸಹೋದರಿಯರ ನಡುವಿನ ಪವಿತ್ರ ಸಂಬಂಧದ ಈ ರಕ್ಷಾಬಂಧನ ಎಲ್ಲರಲ್ಲೂ ಅವಿನಾಭಾವ ಸಂಬಂಧ ಬೆಳೆಸಲಿ’ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು ಅತಿಥಿಗಳಿಗೆ ರಾಕಿ ಕಟ್ಟಿ ಆರತಿ ಬೆಳಗಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ರಾಜೇಶ್ ಎನ್. ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳು ಪರಸ್ಪರ ರಾಖಿ ಕಟ್ಟುವುದರೊಂದಿಗೆ ರಕ್ಷಾಬಂಧನವನ್ನು ಸಂಭ್ರಮದಿಂದ ಆಚರಿಸಿದರು. ಸಹ ಶಿಕ್ಷಕಿ  ಪ್ರವೀಣ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here