ಪುತ್ತೂರು: ಔಷಧೀಯ ಸಸ್ಯ ಸಂಕುಲದ ಸಂರಕ್ಷಣೆಯ ಉದ್ದೇಶದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘವು “ವಿವೇಕ ಸಂಜೀವಿನಿ” ಗಿಡ ಬೆಳೆಸುವ ಹಬ್ಬ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ. ತದಂಗವಾಗಿ ಅದರ ಅಂಗಸಂಸ್ಥೆಗಳಲ್ಲೊಂದಾದ ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಆ.28ರಂದು ಔಷಧೀಯ ಸಸ್ಯ ಸಂಕುಲದ ಮಾಹಿತಿ ಕಾರ್ಯಾಗಾರವನ್ನು ವಿದ್ಯಾರ್ಥಿಗಳಿಗಾಗಿ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ದಿನೇಶ್ ನಾಯಕ್ ವಿಟ್ಲ ಇವರು, ನಿಸರ್ಗದಲ್ಲಿರುವ ಅಪರೂಪದ ಔಷಧೀಯ ಸಸ್ಯಗಳು ಹಾಗೂ ಅವುಗಳ ಉಪಯೋಗದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ವಸಂತಿ ಕೆ., ಪ್ರಾಂಶುಪಾಲೆ ಸಿಂಧು ವಿ.ಜಿ. ಹಾಗೂ ಉಪ ಪ್ರಾಂಶುಪಾಲೆ ಹೇಮಾವತಿ ಎಂ.ಎಸ್. ಉಪಸ್ಥಿತರಿದ್ದರು. ಶಿಕ್ಷಕಿ ರಶ್ಮಿತಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಶಿಕ್ಷಕಿ ಶ್ರೀದೇವಿ ಹೆಗ್ಡೆ ಸ್ವಾಗತಿಸಿ, ವಂದಿಸಿದರು.