ಕಚೇರಿ ಕಂಡು ಕ್ಷೇತ್ರದ ಜನರು ಸಂತಸ ವ್ಯಕ್ತಪಡಿಸಿದ್ದಾರೆ: ಶಾಸಕ ರೈ
ಪುತ್ತೂರು: ಪುತ್ತೂರು ಶಾಸಕ ಅಶೋಕ್ ರಐಯವರ ನೂತನ ಕಚೇರಿಯಲ್ಲಿ ಆ. 30 ರಂದು ಮೊದಲ ಜನತಾದರ್ಶನ ಕಾರ್ಯಕ್ರಮ ನಡೆಯಿತು. ಕಚೇರಿಯಲ್ಲಿ ಸರ್ವಜನಿಕರು ಕಿಕ್ಕಿರಿದು ಸೇರಿದ್ದರು. ಸೇರಿದ ಸಾರ್ವಜನಿಕರಿಂದ ಶಾಸಕರು ಅಹವಾಲು ಸ್ವೀಕರಿಸಿ ಕೆಲವೊಂದಕ್ಕೆ ಸ್ಥಳದಲ್ಲೇ ಪರಿಹಾರವನ್ನು ಸೂಚಿಸಿದರು. ಈ ಹಿಂದೆ ಶಾಸಕರ ಚುನಾವಣಾ ಕಚೇರಿಯಲ್ಲಿ ನಡೆಯುತ್ತಿದ್ದ ಅಹವಾಲು ಸ್ವೀಕಾರ ಕಾರ್ಯ ಇಂದು ನೂತನ ಕಚೇರಿಯಲ್ಲಿ ನಡೆಯಿತು.
ವಿಶಾಲವಾದ ಪಾರ್ಕಿಂಗ್ ಮತ್ತು ವಿಸ್ತ್ರತವಾದ ಕಚೇರಿ ಇರುವ ಕಾರಣ ಜನರಿಗೆ ಶಾಸಕರನ್ನು ಭೇಟಿಯಾಗಲು ಸುಲಭ ಸಾಧ್ಯವಾಯಿತು. ಕಚೇರಿಗೆ ಬಂದ ಸಾರ್ವಜನಿಕರನ್ನು ವಿವಿಧ ಸೆಕ್ಷನ್‌ಗಳಲ್ಲಿರುವ ಸಿಬಂದಿಗಳು ಮಾತನಾಡಿಸಿ ಅವರಿಗೆ ಸೂಕ್ತ ಸಲಹೆ ಮತ್ತು ಮಾಹಿತಿಗಳನ್ನು ಒದಗಿಸಿದಿರು. ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳ ಕೊರತೆ ಇದ್ದವರಿಗೆ ದಾಖಲೆಗಳನ್ನು ಸಂಗ್ರಹಿಸಿ ಅರ್ಜಿ ನೀಡುವುದು ಮತ್ತು ಎಲ್ಲಿ ಹೇಗೆ ಅರ್ಜಿ ನೀಡಬೇಕಗಿದೆ ಎಂಬುದನ್ನು ಸಿಬಂದಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಹೊಸ ಕಚೇರಿಗೆ ಬಂದ ಸಾರ್ವಜನಿಕರು ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ನೂಕು ನುಗ್ಗಾಟ ಇಲ್ಲದೆ ಸರತಿ ಸಾಲಿನಲ್ಲಿ ಬಂದು ಶಾಸಕರನ್ನು ಭೇಟಿಯಾಗಲು ಅನುಕೂಲ ಕಲ್ಪಿಸಿದ್ದೀರಿ, ಕುಡಿಯುವ ನೀರು ಮತ್ತು ಸಿಬಂದಿಗಳಿಂದ ಸೂಕ್ತ ಸಲಹೆ ಮತ್ತು ಮಾಹಿತಿಯನ್ನು ಒದಗಿಸಿದ್ದೀರಿ ಎಂದು ಕೆಲವರು ಬಹಳ ಖುಷಿಯಿಂದ ಹೇಳಿದ್ದಾರೆ. ಜನರ ಹಿತಕ್ಕಾಗಿಯೇ ವಿಶಾಲವಾದ ಕಚೇರಿಯನ್ನು ಆರಂಭಿಸಿದ್ದೇನೆ, ಕ್ಷೇತ್ರದ ಕಟ್ಟಕಡೇಯ ವ್ಯಕ್ತಿಯೂ ನನ್ನನ್ನು ಭೇಟಿಯಾಗಿ ಪರಿಹಾರವನ್ನು ಕಂಡುಕೊಳ್ಳಬಹುದು ಯಾವುದೇ ಮಧ್ಯವರ್ತಿಗಳ ಸಹಕಾರವೂ ಬೇಡ. ನಾನು ಕಚೇರಿಯಲ್ಲಿ ಇಲ್ಲದೇ ಇದ್ದರೂ ಸಾರ್ವಜನಿಕರು ತಮ್ಮ ಕೆಲಸವನ್ನು ಮಾಡಿಕೊಂಡು ಹೋಗಬಹುದು. ಸಾರ್ವಜನಿಕರ ತೃಪ್ತಿಯಿಂದ ನಾನು ಕೂಡಾ ಸಂತುಷ್ಟನಾಗಿದ್ದೇನೆ
ಅಶೋಕ್ ರೈ, ಶಾಸಕರು ಪುತ್ತೂರು