ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ರಾಮ ನಾಯ್ಕ ಅವರಿಗೆ ಸೇವಾ ನಿವೃತ್ತಿ

0

ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣೆ ಎ.ಎಸ್ ಐ ರಾಮ ನಾಯ್ಕ ಅವರು ಆ.31ರಂದು ನಿವೃತ್ತಿ ಹೊಂದಲಿದ್ದಾರೆ.
ಆರ್ಯಾಪು ಗ್ರಾಮದ ಗೆಣಸಿನಕುಮೇರು ನಿವಾಸಿಯಾಗಿರುವ ರಾಮ ನಾಯ್ಕ ಅವರು 1989ರಲ್ಲಿ ಪಾಂಡೇಶ್ವರ ಠಾಣೆಯಲ್ಲಿ ಪೊಲೀಸ್‌ಗೆ ಸೇರ್ಪಡೆಗೊಂಡ ಗೊಂಡ ಅವರು, ಮಂಗಳುರು ಸಂಚಾರ ಪೊಲೀಸ್ ಠಾಣೆ, ಬಂದಾರು, ಅಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿ ಮುಂಭಡ್ತಿ ಹೊಂದಿ ಪುತ್ತೂರು ಅರಣ್ಯ ಸಂಚಾರಿ ದಳ, ಬಳಿಕ ಎ.ಎಸ್.ಆಗಿ ಮುಂಭಡ್ತಿ ಹೊಂದಿ ಪುತ್ತೂರು ನಗರ ಪೊಲೀಸ್ ಠಾಣೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆ, ಬಳಿಕ ಎಸ್.ಐ ಆಗಿ ಮುಂಭಡ್ತಿ ಹೊಂದಿ ಪುಂಜಲಕಟ್ಟೆ, ದರ್ಮಸ್ಥಳ, ಕೊಲ್ಲೂರು, ಬಂಟ್ವಾಳ ಸಂಚಾರ, ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ, ಕಳೆದ ಮೂರು ತಿಂಗಳಿಂದ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.

ಜನಮೆಚ್ಚಿದ ಅಧಿಕಾರಿಯಾಗಿ ಆಯ್ಕೆ:
ಸುದ್ದಿ ಬಿಡುಗಡೆ ಪತ್ರಿಕೆಯಿಂದ 2021ರಲ್ಲಿ ನಡೆದ ಜನಮೆಚ್ಚಿದ ಇಲಾಖೆ, ಅಧಿಕಾರಿಗಳ ಆನ್‌ಲೈನ್ ಆಯ್ಕೆಯಲ್ಲಿ ಎಸ್.ಐ ರಾಮ ನಾಯ್ಕ ಅವರು ಸಂಚಾರ ಪೊಲೀಸ್ ಠಾಣೆಯ ಉತ್ತಮ ಅಧಿಕಾರಿಯಾಗಿ ಆಯ್ಕೆಗೊಂಡಿದ್ದರು. ಇದರ ಜೊತೆಗೆ ಹಿಂದೆ ವಾರಂಟ್ ವಿಭಾಗದ ಉತ್ತಮ ಕರ್ತವ್ಯಕ್ಕೆ ದ.ಕ.ಜಿಲ್ಲಾ ಎಸ್ಪಿ ಅವರಿಂದ ಅಭಿನಂದನಾ ಪತ್ರ ಪಡೆದು ಕೊಂಡಿದ್ದರು. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಂದರ್ಭ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಎಲ್ಲೂ ಲೋಪವಿಲ್ಲದೆ ಕೆಲಸ ನಿರ್ವಹಿಸಿದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲಾಗಿತ್ತು. ಪ್ರಸ್ತುತ ಅವರು ಆರ್ಯಾಪು ಗ್ರಾಮದ ಗೆಣಸಿನಕುಮೇರಿನಲ್ಲಿ ವಾಸ್ತವ್ಯ ಹೊಂದಿದ್ದಾರೆ. ಇವರ ಪತ್ನಿ ಗೀತಾ, ಪುತ್ರಿ ಪ್ರೀತಿ ಅವರಿಗೆ ವಿವಾಹವಾಗಿದ್ದು, ಇನ್ನೋರ್ವ ಪುತ್ರಿ ಪ್ರಿಯ ಅವರು ಬೆಂಗಳೂರು ಕಂಪೆನಿಯಲ್ಲಿ ಸಾಪ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ಪುತ್ರ ಪ್ರೀತಂ ಸುರತ್ಕಲ್ ಎನ್.ಐ.ಟಿ.ಕೆಯಲ್ಲಿ ಇಂಜಿನಿಯರ್ ಕಲಿಯುತ್ತಿದ್ದಾರೆ.

LEAVE A REPLY

Please enter your comment!
Please enter your name here