ಕಡಬ: ಶ್ರೀದೇವಿ ಗೋಲ್ಡ್ ಪ್ಯಾಲೇಸ್ ನವೀಕರಣಗೊಂಡು ಶುಭಾರಂಭ

0

ಕಡಬ: ಸುಮಾರು 50 ವರ್ಷಗಳ ಹಿಂದೆ ದಿ.ಸದಾನಂದ ಆಚಾರ್ಯ ಅವರು ಕಡಬದಲ್ಲಿ ಆರಂಭಿಸಿದ ಕಡಬದ ಪ್ರಥಮ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಮಾರಾಟ ಮಳಿಗೆ ಶ್ರೀದೇವಿ ಗೋಲ್ಡ್ ಪ್ಯಾಲೇಸ್ ಸುಸಜ್ಜಿತವಾಗಿ ನವೀಕರಣಗೊಂಡು ಕಡಬ ಪೇಟೆಯ ಶ್ರೀ ದುರ್ಗಾಂಬಿಕಾ ಟವರ್‍ಸ್‌ನಲ್ಲಿ ಬುಧವಾರ ಶುಭಾರಂಭಗೊಂಡಿತು.


ಮಳಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಮಾಲಕರ ಮಾತೃಶ್ರೀ ಸರೋಜಿನಿ ಸದಾನಂದ ಆಚಾರ್ಯ ಅವರು ಪುತ್ತೂರಿನಿಂದ ಆಗಮಿಸಿ ಸಂಸ್ಥೆಯನ್ನು ಆರಂಭಿಸಿದ ಸದಾನಂದ ಆಚಾರ್ಯ ಅವರು ಆಗಿನ ಕಾಲದಲ್ಲಿ ಕಡಬ ಪರಿಸರದಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು, ಎಲ್ಲರ ಮನಸ್ಸನ್ನು ಗೆದ್ದಿದ್ದರು. ಮಕ್ಕಳು ಅವರು ಹಾಕಿಕೊಟ್ಟ ಆದರ್ಶಗಳನ್ನು ಮೈಗೂಡಿಸಿಕೊಂಡು ಸಂಸ್ಥೆಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿರುವುದು ಸಂತಸ ತಂದಿದೆ ಎಂದರು.


ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಭೇಟಿ ನೀಡಿ ಶುಭ ಹಾರೈಸಿದರು. ಧಾರ್ಮಿಕ ವಿಧಿಗಳನ್ನು ಪೂರೈಸಿದ ಕೆ.ಕೇಶವ ಪುರೋಹಿತ್ ಮಾತನಾಡಿ, ಸಂಸ್ಥೆಯು ಉತ್ತರೋತ್ತರ ಅಭಿವೃದ್ದಿಯಾಗಲಿ ಎಂದು ಶುಭ ಹಾರೈಸಿದರು.
ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ಕಡಬದ ಬೆಳವಣಿಗೆಗೆ ಅಗತ್ಯವಾದ ಸುಸಜ್ಜಿತ ಚಿನ್ನಾಭರಣಗಳ ಮಳಿಗೆಯನ್ನಾಗಿ ಮಾಡಿರುವುದು ಶ್ಲಾಘನೀಯ, ಸಮಾಜದ ಜತೆ ಗುರುತಿಸಿಕೊಂಡಿರುವ ದಿನೇಶ್ ಆಚಾರ್ಯ ಅವರು ಯಶಸ್ವಿಯಾಗಿ ವ್ಯವಹಾರವನ್ನು ನಡೆಸಿಕೊಂಡು ಬಂದಿದ್ದಾರೆ, ಮುಂದೆಯೂ ಇವರ ವ್ಯವಹಾರ ಯಶಸ್ವಿಯನ್ನು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು.


ಸರಸ್ವತೀ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಮಂಕುಡೆ ವೆಂಕಟ್ರಮಣ ರಾವ್ ಮಾತನಾಡಿ ಸಮಾಜಕ್ಕೆ ತನ್ನ ದುಡಿಮೆಯ ಒಂದಿಷ್ಟು ಭಾಗವನ್ನು ನೀಡುತ್ತಾ ತನ್ನ ಏಳಿಗೆಯೊಂದಿಗೆ ಶ್ರಮಿಸುತ್ತಿರುವ ದಿನೇಶ್ ಆಚಾರ್ಯ ಅವರ ಸಂಸ್ಥೆಯು ಅಭಿವೃದ್ದಿಯಾಗಲಿ ಎಂದು ಶುಭ ಹಾರೈಸಿದರು.
ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ ಅವರು ಮಾತನಾಡಿ, ಶ್ರಮಜೀವಿಯಾಗಿದ್ದ ದಿ. ಸದಾನಂದ ಆಚಾರ್ಯ ಅವರು ಹಾಕಿ ಕೊಟ್ಟ ಹೆಜ್ಜೆಯಲ್ಲಿ ಯಶಸ್ವಿ ಉದ್ಯಮದತ್ತ ಸಾಗುತ್ತಿರುವ ದಿನೇಶ್ ಆಚಾರ್ಯ ಅವರು ಸಮಾಜದಲ್ಲಿ ಗುರುತಿಸಿಕೊಂಡವರು. ತಾನು ಅಭಿವೃದ್ದಿಯಾಗುವುದರೊಂದಿಗೆ ಸಮಾಜದ ಅಭಿವೃದ್ದಿಗೂ ತನ್ನ ಕೊಡುಗೆಯನ್ನು ನೀಡಿದ್ದಾರೆ. ಪತ್ರಕರ್ತ ನಾಗರಾಜ್ ಎನ್.ಕೆ. ಅವರು ಮಾತನಾಡಿ, ಉದ್ಯಮದ ಜತೆಗೆ ಸಂಘ ಸಂಸ್ಥೆಯಲ್ಲಿಯೂ ತನ್ನನ್ನು ತೊಡಗಿಸಿಕೊಂಡು ದಿನೇಶ್ ಆಚಾರ್ಯ ಅವರು ಮುಟ್ಟಿದ ಕೆಲಸವನ್ನು ಯಶಸ್ವಿಯಾಗಿ ಪೂರೈಸುವ ಶಕ್ತಿ ಇರುವವರು, ಇವರ ಉದ್ಯಮ ಯಶಸ್ವಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು.


ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ ಅವರು ಮಾತನಾಡಿ ಶುಭ ಹಾರೈಸಿದರು.
ಮಳಿಗೆಯ ಇನ್ನೋರ್ವ ಪಾಲುದಾರ ಕೆ.ಎಸ್.ಪ್ರಶಾಂತ್ ಆಚಾರ್ಯ, ಮಮತಾ ದಿನೇಶ್ ಆಚಾರ್ಯ, ಶಿಲ್ಪಾ ಪ್ರಶಾಂತ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ವಿಶೇಷ ಕೊಡುಗೆಗಳ ಕೂಪನ್: ನವೀಕರಣಗೊಂಡು ಶುಭಾರಂಭಗೊಂಡಿರುವ ಹಿನ್ನಲೆಯಲ್ಲಿ ಗ್ರಾಹಕರಿಗೆ 10 ಸಾವಿರ ಖರೀದಿಯ ಮೇಲೆ ವಿಶೇಷ ಬಹುಮಾನಗಳ ಕೂಪನ್‌ಗಳನ್ನು ನೀಡಲಾಗುತ್ತಿದೆ. ಈ ಸೌಲಭ್ಯ ಒಂದು ತಿಂಗಳ ಕಾಲ ಲಭ್ಯವಿದೆ.

ಅತಿಥಿಗಳನ್ನು ಬರಮಾಡಿಕೊಂಡು ಮಾತನಾಡಿದ ಮಳಿಗೆಯ ಪಾಲುದಾರ ಕೆ.ಎಸ್. ದಿನೇಶ್ ಆಚಾರ್ಯ ಅವರು ಸಂಪೂರ್ಣ ಹವಾನಿಯಂತ್ರಿತ ನವೀಕೃತ ಮಳಿಗೆಯಲ್ಲಿ 916 ಹಾಲ್‌ಮಾರ್ಕ್ ಹ್ಯಾಂಡ್‌ಮೇಡ್ ಕರಿಮಣಿ ಕಂಠಿ, ನೆಕ್ಲೇಸ್, ಬಳೆಗಳು, ಬ್ರಾಸ್‌ಲೆಟ್‌ಗಳು, ಬೆಂಡೋಲೆಗಳು, ಸ್ಟಡ್‌ಗಳು, ವಿವಿಧ ವಿನ್ಯಾಸದ ಬೆಳ್ಳಿಯ ಆಭರಣಗಳು, ಸೊಂಟದ ಚೈನು, ಕಾಲು ಚೈನು, ಕಾಲುಂಗುರ, ಕಾಲು ಬಳೆ, ಉಂಗುರಗಳು, ಎಸಿಪಿಎಲ್ ಶ್ರೇಣಿಯ ಚೈನುಗಳು, ಕಡಗಗಳು, ಉಂಗುರಗಳು, ಬ್ರಾಸ್‌ಲೆಟ್‌ಗಳು, ಬೆಳ್ಳಿಯ ಕಿವಿಯೋಲೆಗಳು, ಪೆಂಡೆಂಟ್‌ಗಳು, ದೈವ ದೇವರುಗಳ ಚಿನ್ನ ಬೆಳ್ಳಿಯ ಹರಕೆ ಸಾಮಾಗ್ರಿಗಳು, ಚಿನ್ನ ಹಾಗೂ ಬೆಳ್ಳಿಯ ಸ್ಮರಣಿಕೆಗಳು, ಪೂಜಾ ಸಾಮಾಗ್ರಿಗಳು ವಿಶಾಲ ಶ್ರೇಣಿಯಲ್ಲಿ ಲಭ್ಯವಿದೆ .ಹಳೆಯ ಚಿನ್ನಾಭರಣಗಳನ್ನು ಕರಗಿಸಿ 916 ನೂತನ ಚಿನ್ನಾಭರಣಗಳನ್ನು ಕ್ಲಪ್ತ ಸಮಯದಲ್ಲಿ ತಯಾರಿಸಿಕೊಡಲಾಗುವುದು. ಹಾಗೆಯೇ ಬ್ಯಾಂಕ್, ಫೈನಾನ್ಸ್‌ಗಳಲ್ಲಿ ಅಡವಿರಿಸಿದ ಚಿನ್ನಾಭರಣಗಳನ್ನು ಬಿಡಿಸಿಕೊಟ್ಟು ಉತ್ತಮ ದರ ನೀಡಿ ಖರೀದಿಸಲಾಗುವುದು. ಸಾಂಪ್ರದಾಯಿಕ ಕಿವಿ ಮತ್ತು ಮೂಗು ಚುಚ್ಚುವ ವ್ಯವಸ್ಥೆ ಮಾತ್ರವಲ್ಲದೇ ಅತ್ಯಾಧುನಿಕ ಗನ್‌ಶಾಟ್ ವ್ಯವಸ್ಥೆ ನಮ್ಮಲ್ಲಿ ಲಭ್ಯವಿದೆ ಎಂದು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here