ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (CISF)ನ ಸಬ್ ಇನ್ಸ್ಪೆಕ್ಟರ್ ಹರಿಯಪ್ಪ ಗೌಡ ಹುದೇರಿ ಸೇವಾ ನಿವೃತ್ತಿ

0

ಪುತ್ತೂರು: ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (ಮಿನಿಸ್ಟರಿ ಆಫ್ ಹೋಮ್ ಅಫೇರ್‍ಸ್)ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹರಿಯಪ್ಪ ಗೌಡ ಹುದೇರಿ ರವರು ಆ.31ರಂದು ಸೇವಾ ನಿವೃತ್ತಿಯನ್ನು ಹೊಂದಿದರು. ತಮ್ಮ 40 ವರ್ಷಗಳ ಸುಧೀರ್ಘ ಸೇವೆಯಲ್ಲಿ ದೇಶದ ವಿವಿಧ ರಾಜ್ಯಗಳಾದ ಪಶ್ಚಿಮ ಬಂಗಾಳ, ಬಿಹಾರ, ತ್ರಿಪುರ, ಆಂದ್ರ, ತಮಿಳುನಾಡು, ಹಿಮಾಚಲ ಪ್ರದೇಶ, ಕರ್ನಾಟಕ ಮುಂತಾದ ಹಲವಾರು ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಹರಿಯಪ್ಪ ಗೌಡರವರು ಪ್ರಸ್ತುತ ಬೆಂಗಳೂರಿನ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಸಂಸ್ಥೆಯ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹರಿಯಪ್ಪ ಗೌಡರವರು ಮೂಲತಃ ಮುರುಳ್ಯ ಹುದೇರಿ, ದಿ. ಹುಕ್ರಪ್ಪ ಗೌಡ ಮತ್ತು ದೇವಮ್ಮರವರ ಪುತ್ರರಾಗಿದ್ದು, ಪತ್ನಿ ಲಲಿತಾ ಮತ್ತು ಪುತ್ರಿ ಟೀನಾ, ಅಳಿಯ ಶಿಭುರವರು ಐಟಿ ಉದ್ಯೋಗಿಗಳಾಗಿದ್ದು ಮೊಮ್ಮಗ ತನ್ಶ್ ಅದ್ವೈತ್ ಜೊತೆ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ.

LEAVE A REPLY

Please enter your comment!
Please enter your name here