ಈಶ್ವರಮಂಗಲ: ಶ್ರೀ ಗಜಾನನ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಆಗಸ್ಟ್ 30ರಂದು ರಕ್ಷಾಬಂಧನ ಹಾಗೂ ವಿಶ್ವ ಸಂಸ್ಕೃತ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿ ಡಾ. ವೆಂಕಟೇಶ್ ಜೋಶಿಯವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಸಂಸ್ಕೃತ ಭಾಷೆಯನ್ನು ಕಲಿತರೆ ಮಾತ್ರ ಭಾರತೀಯ ಸಂಸ್ಕೃತಿಯನ್ನು ತಿಳಿಯಲು ಸಾಧ್ಯ ಯಾಕೆಂದರೆ ನಮ್ಮ ಪುರಾಣ ಗ್ರಂಥಗಳೆಲ್ಲಾ ಸಂಸ್ಕೃತ ಭಾಷೆಯಲ್ಲೇ ಇದೆ ಹಾಗೂ ಸಂಸ್ಕೃತ ಶ್ಲೋಕವನ್ನು ನಾವು ಹೇಳುವುದರಿಂದ ಉಚ್ಚಾರಣಾ ಸಾಮರ್ಥ್ಯವನ್ನು ಉತ್ತಮ ಪಡಿಸಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷ ಶ್ರೀಯುತ ನನ್ಯ ಅಚ್ಚುತ ಮೂಡೆತ್ತಾಯ ಇವರು ಮಾತನಾಡಿ, ಎಲ್ಲಾ ಭಾಷೆಗಳ ಮೂಲವಾದ ಸಂಸ್ಕೃತವು ಇಂದು ಆಯುರ್ವೇದ ಶಾಸ್ತ್ರಗಳಲ್ಲಿ ಬಹು ಮುಖ್ಯ ಪಾತ್ರ ವಹಿಸಿದೆ ಎಂದರು. ಸಂಸ್ಕೃತ ಅಧ್ಯಾಪಕ ಗುರುವಾಯುರಪ್ಪ ಇವರು ಮಾತನಾಡಿ, ಯಾವುದೇ ಭಾಷೆಯನ್ನಾದರೂ ಶ್ರದ್ಧೆಯಿಂದ ಕಲಿತರೆ ಅದರಿಂದ ಶೀಘ್ರವಾದ ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಶಿಕ್ಷಕಿ ಸುಪ್ರೀತಾ ಇವರು ರಕ್ಷಾ ಬಂಧನ ಹಾಗೂ ಸಂಸ್ಕೃತ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿದರು. ಪ್ರಾಂಶುಪಾಲ ಕೆ ಶಾಮಣ್ಣ, ಮುಖ್ಯ ಗುರುಗಳಾದ ಅಮರನಾಥ ಬಿ ಪಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಉದಯ ಶ್ಯಾಂ ಭಟ್ ಮತ್ತು ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಶಿಕ್ಷಕ-ಶಿಕ್ಷಕೇತರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ರಿತ್ವಿಕಾ ಮತ್ತು ಬಳಗ ಪ್ರಾರ್ಥಿಸಿ, ಸಿಂಚನಾ ಸ್ವಾಗತಿಸಿ ಕುಮಾರಿ ಲಿಖಿತಾ ವಂದಿಸಿ, ಫಾತಿಮತ್ ಮುಜಾಫಿರ್ ಮತ್ತು ಕುಮಾರಿ ಕಾವ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ರಕ್ಷಾ ಬಂಧನ ಸಂಕೇತವಾಗಿ ಮಕ್ಕಳು ಪರಸ್ಪರ ರಾಖಿಯನ್ನು ಕಟ್ಟಿಸಿಕೊಂಡು ಸಂಭ್ರಮಿಸಿದರು.